ಆರಿಕೋಡಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿಯವರ ಶುಭಾಶೀರ್ವಾದಗಳೊಂದಿಗೆ ಲೋಕಾರ್ಪಣೆ
ಅರಂಬೂರು ನಾಗೇಶ್ ರೈಯವರ ಮಾಲಕತ್ವದ ಹೋಟೆಲ್ ಶ್ರೀ ಚಾಮುಂಡೇಶ್ವರಿ ಅ. 20 ರಂದು ಅರಂಬೂರಿನಲ್ಲಿ ಶುಭಾರಂಭಗೊಳ್ಳಲಿದೆ.
ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿಯವರ ಶುಭಾಶೀರ್ವಾದಗಳೊಂದಿಗೆ ಲೋಕಾರ್ಪಣೆಗೊಳ್ಳಲಿದೆ.
ಮುಖ್ಯ ಅತಿಥಿಗಳಾಗಿ ಶಾಸಕಿ ಕು. ಭಾಗೀರಥಿ ಮುರುಳ್ಯ, ವಿಶ್ರಾಂತ ಪ್ರಾಂಶುಪಾಲ ಕೆ.ಆರ್.ಗಂಗಾಧರ್, ನ.ಪಂ. ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಆಲೆಟ್ಟಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ವೀಣಾ ವಸಂತ್, ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ಸಂತೋಷ್ ಬಿ.ಪಿ., ಸುಳ್ಯ ತಾಲೂಕು ವರ್ತಕರ ಸಂಘದ ಗೌರವಾಧ್ಯಕ್ಷ ಪಿ.ಬಿ.ಸುಧಾಕರ ರೈ, ಉದ್ಯಮಿಗಳಾದ ಲ. ರಮೇಶ್ ಶೆಟ್ಟಿ, ದೇವಿಪ್ರಸಾದ್ ಕುದ್ಪಾಜೆ, ಆಲೆಟ್ಟಿ ಗ್ರಾ.ಪಂ. ಸದಸ್ಯ ಸುದೇಶ್ ಅರಂಬೂರು ಉಪಸ್ಥಿತರಿರುವರು ಎಂದು ಮಾಲಕರು ತಿಳಿಸಿದ್ದಾರೆ.















ಈಗಾಗಲೇ ನಾಗೇಶ್ ರೈಯವರ ಮಾಲಕತ್ವದ ಚಾಮುಂಡಿ ಕೆಟರರ್ಸ್ (ಸಸ್ಯಹಾರಿ ಮತ್ತು ಮಾಂಸಹಾರಿ) ಕಾರ್ಯನಿರ್ವಹಿಸುತ್ತಿದ್ದು, ಜನರ ಮನಗೆದ್ದಿದೆ.



