ಅಕ್ಷಯ್ ಮಲೆಕೆರ್ಚಿ ನಿಧನ

0

ಕಾಣಿಯೂರು ಮಲೆಕೆರ್ಚಿ ಪುತ್ತೂರು ಡಿಪೋ ಕೆ ಎಸ್ ಆರ್ ಟಿ ಸಿ ಚಾಲಕ ಕಂ ನಿರ್ವಾಹಕರಾದ ಆನಂದ ಗೌಡ ಮತ್ತು ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶಾಖಾ ಪ್ರಬಂಧಕರಾದ ಶ್ರೀಮತಿ
ಸುಮಿತ್ರ ರವರ ಪುತ್ರ ಅಕ್ಷಯ್ ಅ.22 ರಂದು ಅವರ ಪಡ್ಪಿನಂಗಡಿ ನಿವಾಸದಲ್ಲಿ ನಿಧನರಾದರು.

ಅವರಿಗೆ 17 ವರುಷ ವಯಸ್ಸಾಗಿತ್ತು. ಅವರು ಅನೇಕ ವರ್ಷಗಳಿಂದ ಅಸೌಖ್ಯದಿಂದ ಇದ್ದರು.
ಮೃತರು ತಂದೆ, ತಾಯಿ, ಸಹೋದರಿ ಅನುಷ , ಸಹೋದರ ಅಂಕಿತ್ , ಕುಟುಂಬಸ್ಥರನ್ನು ಅಗಲಿದ್ದಾರೆ.