ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಚುನಾವಣೆ

0

ಸುಳ್ಯದ ಮೂವರು ಸಹಿತ 34 ಮಂದಿ ಅಭ್ಯರ್ಥಿಗಳು ಕಣದಲ್ಲಿ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಚುನಾವಣೆ ನ.9ರಂದು ನಡೆಯಲಿದೆ. 23 ಸ್ಥಾನಗಳಿಗೆ ಸುಳ್ಯದ ಮೂವರು ಸಹಿತ ಒಟ್ಟು 34 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಇದ್ದಾರೆ.

ಇಬ್ಬರ ಅವಿರೋಧ : ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೇಶ್ ಕೆ.ಪೂಜಾರಿ, ಕೋಶಾಧಿಕಾರಿ ಸ್ಥಾನಕ್ಕೆ ವಿಜಯ್ ಕೋಟ್ಯಾನ್ ಪಡು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ನೇರ ಸ್ಪರ್ಧೆ ಏರ್ಪಟ್ಟಿದ್ದು ಪುಷ್ಪರಾಜ್ ಬಿ.ಎನ್ ಹಾಗೂ ಶ್ರವಣ್ ಕುಮಾರ್ ಕೆ. ಕಣದಲ್ಲಿದ್ದಾರೆ.

ಉಪಾಧ್ಯಕ್ಷ 3 ಸ್ಥಾನಗಳಿಗೆ 5 ಮಂದಿ ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಉಪಾಧ್ಯಕ್ಷತೆಗೆ ಸುಳ್ಯದ ಗಂಗಾಧರ ಕಲ್ಲಪಳ್ಳಿ, ಮಹಮ್ಮದ್ ಆರೀಫ್,
ಐ.ಬಿ. ಸಂದೀಪ್ ಕುಮಾರ್
ವಿಲ್‌ಫ್ರೆಡ್ ಡಿಸೋಜಾ,
ರಾಜೇಶ್ ಶೆಟ್ಟಿ ಸ್ಫರ್ಧಿಸುತ್ತಿದ್ದಾರೆ.

ಕಾರ್ಯದರ್ಶಿ 3 ಸ್ಥಾನಗಳಿಗೆ 4 ಮಂದಿ ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಕಾರ್ಯದರ್ಶಿ ಸ್ಥಾನಕ್ಕೆ ಎ. ಸಿದ್ದಿಕ್ ನೀರಾಜೆ, ರಾಜೇಶ್ ಕುಮಾರ್, ಸುರೇಶ್ ಡಿ ಪಳ್ಳಿ, ಸತೀಶ್ ಇರಾ ಸ್ಪರ್ಧಿಸುತ್ತಿದ್ದಾರೆ.

ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯತ್ವಕ್ಕೆ ಇಬ್ಬರು ಕಣದಲ್ಲಿದ್ದಾರೆ.
ಹಾಲಿ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಹಾಗೂ ಮುಹಮ್ಮದ್ ಅನ್ಸಾರ್ ಇನೋಳಿ ಸ್ಪರ್ಧಿಸುತ್ತಿದ್ದಾರೆ.

ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರ 15 ಸ್ಥಾನಗಳಿಗೆ 21 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸುಳ್ಯದ ಗಿರೀಶ್ ಅಡ್ಪಂಗಾಯ, ಹರೀಶ್ ಮೋಟುಕಾನ,
ಅಶೋಕ್ ಶೆಟ್ಟಿ ಬಿ.ಎನ್, ಸಂದೇಶ್ ಜಾರ, ಪ್ರಕಾಶ್ ಸುವರ್ಣ, ಸಂದೀಪ್ ಕುಮಾರ್ ಎಂ. ಲಕ್ಷ್ಮಿನಾರಾಯಣ ರಾವ್,
ಶಶಿಧರ ಬಂಗೇರ, ದಿವಾಕರ ಪದ್ಮುಂಜ, ಕಿರಣ್ ಯು. ಸಿರ್ಸೀಕರ್, ಅಭಿಷೇಕ್ ಎಚ್.ಎಸ್, ಜಯಶ್ರೀ, ಮಂಜುನಾಥ್ ಕೆ.ಪಿ., ಭುವನೇಶ್ವರ ಜಿ. ಸಂದೀಪ್ ವಾಗ್ಲೆ, ಪ್ರವೀಣ್ ರಾಜ್ ಕೆ.ಎಸ್, ಹರೀಶ್ ಕೆ. ಆದೂರ್,
ಲೋಕೇಶ್ ಸುರತ್ಕಲ್, ಶೇಕ್ ಜೈನುದ್ದೀನ್, ಸಂದೀಪ್ ಸಾಲ್ಯಾನ್, ಆರೀಫ್ ಕಲ್ಕಟ್ಟ ಕಣದಲ್ಲಿದ್ದಾರೆ ಎಂದು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಚುನಾವಣಾಧಿಕಾರಿಗಳಾದ ವಾರ್ತಾಧಿಕಾರಿ ಖಾದರ್ ಷಾ ತಿಳಿಸಿದ್ದಾರೆ.