ದೇವಚಳ್ಳ: ರಂಗಮಂದಿರಕ್ಕೆ ಧನಸಹಾಯ ಮುಂಜೂರಾತಿ ಪತ್ರ ವಿತರಣೆ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ ಸಿ ಟ್ರಸ್ಟ್ ಸುಳ್ಯ ತಾಲೂಕು ಇವರಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಾವಿನಕಟ್ಟೆಯಲ್ಲಿ ರಂಗ ಮಂದಿರದ ಕೆಲಸಕ್ಕೆ ಯೋಜನೆಯಿಂದ ಮಂಜೂರಾದ ರೂಪಾಯಿ 30,000/-ದ ಮಂಜೂರಾತಿ ಪತ್ರವನ್ನು ತಾಲೂಕು ಯೋಜನಾಧಿಕಾರಿ ಮಾಧವ ಗೌಡ ರವರು ನ.1 ರಂದು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾವಿನಕಟ್ಟೆ ಒಕ್ಕೂಟದ ಅಧ್ಯಕ್ಷರಾದ ಬಾನು ಪ್ರಕಾಶ್ ತಳೂರು, ವಲಯ ಮೇಲ್ವಿಚಾರಕರಾದ ರಾಜೇಶ್, ಸೇವಾ ಪ್ರತಿನಿಧಿ ಶ್ರೀಮತಿ ಉಷಾಲತ ಶಾಲಾ, ಎಸ್.ಡಿ.ಎಂ.ಸಿ ಅಧ್ಯಕ್ಷ ವಸಂತ ಆಚಾರಿಕಾನ, ಉಪಾಧ್ಯಕ್ಷೆ ಶ್ರೀಮತಿ ಭವ್ಯಾ, ಪ್ರಭಾರ ಮುಖ್ಯ ಗುರುಗಳಾದ ದಯಾನಂದ. ಎಸ್, ಸಹ ಶಿಕ್ಷಕರಾದ ಶ್ರೀಮತಿ ರಾಧಿಕಾ ಕೆ.ಎಸ್. ಮತ್ತು ಶ್ರೀಮತಿ ಆಶಾ.ಎಸ್ ಉಪಸ್ಥಿತರಿದ್ದರು.