ಕುದ್ರೆಪಾಯದಲ್ಲಿ ಮನೆಯಿಂದ ಕಳವು

0

ಶಬರಿಮಲೆ ಯಾತ್ರಾರ್ಥಿಗಳು ಭಿಕ್ಷಾಟನೆಗೆ ಬಂದಿದ್ದರು..!

ಚೆಂಬು ಗ್ರಾಮದ ಕುದ್ರೆಪಾಯ ವೀರಪ್ಪ ಗೌಡ ಪೂಜಾರಿಗದ್ದೆ ಎಂಬವರ ಮನೆಯಿಂದ ನ.5ರಂದು ಚಿನ್ನ ಹಾಗೂ ನಗದು ಕಳವಾಗಿರುವ‌ ಕುರಿತು ಮಾಹಿತಿ ಲಭ್ಯವಾಗಿದೆ.

ವೀರಪ್ಪ ಗೌಡರು ಬೆಳಗ್ಗೆ ಸುಳ್ಯಕ್ಕೆ ಬಂದಿದ್ದರು. ಅವರ ಪತ್ನಿ ಮನೆಗೆ ಬೀಗ ಹಾಕಿ ತೋಟಕ್ಕೆ ಹೋಗಿದ್ದರೆಂದು ತಿಳಿದುಬಂದಿದೆ. ಇಂದು ಬೆಳಿಗ್ಗೆ ಮನೆಯ‌ ಕಪಾಟು ನೋಡಿದಾಗ ಕಪಾಟಿನಲ್ಲಿದ್ದ ಚಿನ್ನ ಹಾಗೂ ನಗದು ಕಾಣೆಯಾಗಿತ್ತೆಂದು ತಿಳಿದುಬಂದಿದೆ.

ಅದೇ ದಿನ ಶಬರೀಮಲೆ ಯಾತ್ರಾರ್ಥಿಗಳಿಬ್ಬರು ಕುದ್ರೆಪಾಯ ಪರಿಸರದಲ್ಲಿ ಮನೆ ಮನೆಗೆ ಹೋಗಿ ಭಿಕ್ಷಾಟನೆ ನಡೆಸುತ್ತಿದ್ದರೆಂದೂ, ವೀರಪ್ಪ ಗೌಡರ ಪಕ್ಕದ‌ ಮನೆಗೆ ಈ ಯಾತ್ರಾ ರ್ಥಿಗಳು ಹೋಗಿದ್ದರೆನ್ನಲಾಗಿದೆ.‌ ಅವರೇ ವೀರಪ್ಪ ಗೌಡರ ಮನೆಗೆ ಬಂದು ಗೋದ್ರೇಜ್‌ನ ಬೀಗ ಮುರಿದು ನಗದು ಹಾಗೂ ಚಿನ್ನ ದೋಚಿ ಹೋಗಿರವಹುದೆಂದು ಶಂಕಿಸಲಾಗಿದೆ. ಆದರೆ ಆ ಸ್ವಾಮಿಗಳು ಯಾರೆಂದು ಯಾರಿಗೂ ಗೊತ್ತಿಲ್ಲ. ಈ ಕುರಿತು ಪೋಲೀಸರಿಗೆ‌ ಮಾಹಿತಿ ನೀಡಿರುವುದಾಗಿ ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.