ಲಾರಿಗೆ ಬೆಂಕಿ ಅವಘಡ – ಚಾಲಕ ಪಾರು

ಮಡಿಕೇರಿಯಿಂದ ಜ್ಯೂಸ್ ಬಾಟ್ಲಿ ತುಂಬಿಕೊಂಡು ಬರುತ್ತಿರುವ ಲಾರಿಯೊಂದು ದೇವರಕೊಲ್ಲಿ ಫಾಲ್ಸ್ ಬಳಿ ನ. ೧೯ ರಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಪಲ್ಟಿಯಾಗಿ ಬಿದ್ದ ಘಟನೆ ವರದಿಯಾಗಿದೆ.















ಈ ಸಂದರ್ಭದಲ್ಲಿ ಲಾರಿಗೆ ಬೆಂಕಿ ಹೊತ್ತಿ ಉರಿದಿದ್ದು, ತಕ್ಷಣ ಮಡಿಕೇರಿ ಅಗ್ನಿಶಾಮಕದವರು ಬಂದು ಬೆಂಕಿ ನಂದಿಸುವ ಪ್ರಯತ್ನವನ್ನು ಮಾಡಿದ್ದಾರೆ. ಘಟನೆಯಿಂದ ಚಾಲಕ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.










