ಡಿ.28 ರಂದು ಅಮೃತ ಮಹೋತ್ಸವ ಆಚರಣೆಗೆ ನಿರ್ಧಾರ : ಉಪ ಸಮಿತಿಗಳ ರಚನೆ

ಪಂಜ ಸರಕಾರಿ ಪದವಿ ಪೂರ್ವ ಕಾಲೇಜು 1951 ರಲ್ಲಿ ಪ್ರಾರಂಭಗೊಂಡು ಈಗ ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ಹಿನ್ನೆಲೆಯಲ್ಲಿ ಡಿ.28 ರಂದು ಅಮೃತ ಮಹೋತ್ಸವ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ.
ನ.19 ರಂದು ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಜಾಕೆ ಮಾಧವ ಗೌಡರ ಅಧ್ಯಕ್ಷತೆಯಲ್ಲಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಅಮೃತ ಮಹೋತ್ಸವ ಯಶಸ್ವಿಗಾಗಿ ವಿವಿಧ ಉಪಸಮಿತಿಗಳನ್ನು ರಚಿಸಿ ಸಂಚಾಲಕರನ್ನು ಆಯ್ಕೆ ಮಾಡಲಾಯಿತು.
ಆರ್ಥಿಕ ಸಮಿತಿ ಸಂಚಾಲಕರಾಗಿ ಪರಮೇಶ್ವರ ಬಿಳಿಮಲೆ, ಕಾರ್ಯಕ್ರಮ ಸಂಯೋಜನೆ ಸಮಿತಿ ಸಂಚಾಲಕರಾಗಿ
ದುರ್ಗಾ ಕುಮಾರ್ ನಾಯರ್ ಕೆರೆ, ಕ್ರೀಡಾ ಸಮಿತಿ ಸಂಚಾಲಕರಾಗಿ ಮಾಧವ ಬಿ.ಕೆ., ಸಾಂಸ್ಕೃತಿಕ ಪ್ರದರ್ಶನ ಸಮಿತಿ ಸಂಚಾಲಕರಾಗಿ ಶಶಿಧರ ಪಳಂಗಾಯ, ಸನ್ಮಾನ ಸಮಿತಿ ಸಂಚಾಲರಾಗಿ
ನೇಮಿರಾಜ ಪಲ್ಲೋಡಿ
ದೇವಿಪ್ರಸಾದ್ ಜಾಕೆ , ಅತಿಥಿ ಸತ್ಕಾರ ಸಮಿತಿ ಸಂಚಾಲಕರಾಗಿ ಸಂತೋಷ್ ಜಾಕೆ ಆಯ್ಕೆಯಾದರು.















ದುರ್ಗಾಕುಮಾರ್ ನಾಯರ್ ಕೆರೆ ( ಸ್ಮರಣ ಸಂಚಿಕೆ ) ತೀರ್ಥಾನಂದ ಕೊಡೆಂಕಿರಿ ( ಆಮಂತ್ರಣ ಮುದ್ರಣ ಮತ್ತು ವಿತರಣೆ ) ಮಧು ಪಂಜ ( ಮಾಧ್ಯಮ ಮತ್ತು ಪ್ರಚಾರ )
ಸತೀಶ್ ಪಂಜ ( ಸಾಂಸ್ಕೃತಿಕ ಸ್ಪರ್ಧೆ ) ಪವನ್ ಪಲ್ಲತ್ತಡ್ಕ ( ಸ್ವಯಂಸೇವಕರು / ಶುಚಿತ್ವ / ನೀರಾವರಿ ) ಸದಾಶಿವ ಸಂಪ ( ಧ್ವನಿ ಮತ್ತು ಬೆಳಕು )
ಜಿನ್ನಪ್ಪ ಅಳ್ಪೆ ( ಪಾರ್ಕಿಂಗ್ )
ಜಯರಾಮ ಕಲ್ಲಾಜೆ ( ಆಹಾರ ) ಸಮಿತಿ ಸಂಚಾಲಕರನ್ನು ಆಯ್ಕೆ ಮಾಡಲಾಯಿತು. ಶಾಶ್ವತ ಯೋಜನೆಗೆ ಅಮೃತ ಮಹೋತ್ಸವ ಸಮಿತಿಗೆ ಜವಾಬ್ದಾರಿ ವಹಿಸಲಾಯಿತು.

ಇಲ್ಲಿ ಕಲಿತು ದೇಶ-ವಿದೇಶಗಳಲ್ಲಿರುವ ಹಳೆ ವಿದ್ಯಾರ್ಥಿಗಳನ್ನು ಕೂಡ ಅಮೃತ ಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ಮಾಡುವುದು, ಅಮೃತ ಮಹೋತ್ಸವದ ಅಂಗವಾಗಿ
ಸಮ್ಮಿಲನ, ಕ್ರೀಡಾ ಕೂಟ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ಸ್ಮರಣ ಸಂಚಿಕೆ ಮತ್ತು ಸಾಕ್ಷ್ಯ ಚಿತ್ರ ನಿರ್ಮಾಣ, ಶಾಶ್ವತ ಯೋಜನೆ ಅನುಷ್ಠಾನ ಮೊದಲಾದ ವಿಚಾರಗಳ ಕುರಿತು ಅಭಿಪ್ರಾಯ ಪಡೆದು ನಿರ್ಣಯ ಕೈಗೊಳ್ಳಲಾಯಿತು.
ಸಂಚಾಲಕರ ನೇತೃತ್ವದಲ್ಲಿ ಉಪಸಮಿತಿಯ ಸಭೆಗಳನ್ನು ಕರೆದು ಕೂಡಲೇ ಕಾರ್ಯಪ್ರವೃತ್ತರಾಗಬೇಕೆಂದು ವಿನಂತಿಸಲಾಯಿತು.
ಪ್ರತಿ ಗ್ರಾಮದಲ್ಲಿರುವ ಹಳೆ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಅಮೃತ ಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ಆಮಂತ್ರಿಸುವ ದೃಷ್ಟಿಯಿಂದ 16 ಗ್ರಾಮಗಳಿಗೆ ಪ್ರತ್ಯೇಕ ಗ್ರಾಮವಾರು ಸಂಚಾಲಕರನ್ನು ನೇಮಿಸಲಾಯಿತು.
ಅಮೃತ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸವಿತಾರ ಮುಡೂರು ಕಾರ್ಯಕ್ರಮ ಆಯೋಜನೆ ಕುರಿತು ಮಾಹಿತಿ ನೀಡಿದರು.
ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಜಳಕದಹೊಳೆ, ಅಮೃತ ಮಹೋತ್ಸವ ಸಮಿತಿ ಪ್ರಧಾನ ಸಂಚಾಲಕ ಚಿನ್ನಪ್ಪ ಸಂಕಡ್ಕ, ಕಾಲೇಜಿನ ಪ್ರಾಂಶುಪಾಲ ಚಿದಾನಂದ, ಮುಖ್ಯ ಶಿಕ್ಷಕ ದೇವಿಪ್ರಸಾದ್, ಸಮಿತಿ ಕಾರ್ಯದರ್ಶಿ ಗುರುಪ್ರಸಾದ್ ತೋಟ , ಎಸ್ ಡಿ ಎಂ ಸಿ ಅಧ್ಯಕ್ಷ ಸೋಮಶೇಖರ, ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಧ್ಯಕ್ಷ ಚಿನ್ನಪ್ಪ ಕಾಣಿಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.










