ಜೆಡಿಎಸ್ ಪಕ್ಷ ಬೆಳ್ಳಿ ಹಬ್ಬ : ಬೆಂಗಳೂರಿನಲ್ಲಿ ಕಾರ್ಯಕ್ರಮ – ಸುಳ್ಯದ‌ ನಾಯಕರು‌ ಭಾಗಿ

0

ಕರ್ನಾಟಕ ರಾಜ್ಯದ ಪ್ರಾದೇಶಿಕ ಪಕ್ಷ ಜಾತ್ಯತೀತ ಜನತಾದಳದ ರಜತ ಮಹೋತ್ಸವ ಸಂಭ್ರಮ ದಲ್ಲಿ ಸುಳ್ಯ ಸೇರಿದಂತೆ ದ. ಕ. ಜಿಲ್ಲಾ ಜನತಾದಳದ ಪ್ರಮುಖರು ಭಾಗಿಯಾಗಿದ್ದಾರೆ.


1999 ನವೆಂಬರ್ ನಲ್ಲಿ ಸ್ಥಾಪನೆ ಯಾದ ಜಾತ್ಯತೀತ ಜನತಾದಳ ಪಕ್ಷ ಕ್ಕೆ 25 ವರ್ಷ ತುಂಬಿದ ಹಿನ್ನಲೆ ಯಲ್ಲಿ ಬೆಂಗಳೂರಿನ ಜೆ. ಪಿ. ಭವನದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮ ದಲ್ಲಿ ಜಿಲ್ಲಾ ಅಧ್ಯಕ್ಷರಾದ ಜಾಕೆ ಮಾಧವ ಗೌಡ, ಸುಳ್ಯ ತಾಲೂಕು ಅಧ್ಯಕ್ಷರಾದ ಸುಕುಮಾರ್ ಕೋಡ್ತುಗುಳಿ, ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಟಿ ಕಾನ, ಕಡಬ ತಾಲೂಕು ಅಧ್ಯಕ್ಷರಾದ ಸೆಯ್ಯದ್ ಮೀರಾಸಾಹೇಬ್, ಬೆಳ್ತಂಗಡಿ ತಾಲೂಕು ಅಧ್ಯಕ್ಷರುಅದ ಪ್ರವೀಣ್ ಚಂದ್ರ ಜೈ ನ್,ಅಬ್ದುಲ್ ರಹೀಮ್ ಹಳೆಗೇಟು, ಜಾಫರ್ ಶರೀಫ್ ಕಾಣಿಯೂರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಷಾ ಜಮೀರ್, ರಾಜ್ಯ ಮೀನುಗಾರಿಕಾ ಘಟಕ ಅಧ್ಯಕ್ಷರು ರತ್ನಾಕರ್ ಸುವರ್ಣ, ಉಪಾಧ್ಯಕ್ಷರು ರಾಘವೇಂದ್ರ ಮತ್ತು ಅನೇಕ ಪ್ರಮುಖರು ಭಾಗವಹಿಸಿದ್ದರು.