
ಸುಳ್ಯ ಸುಬ್ರಹ್ಮಣ್ಯ ರಸ್ತೆಯ ಸೋಣಂಗೇರಿ ಸಮೀಪ ಮುಖ್ಯ ರಸ್ತೆಯಲ್ಲಿ ಹೊಂಡ ನಿರ್ಮಾಣವಾಗಿದ್ದು ಅಪಾಯವನ್ನು ಆಹ್ವಾನಿಸುತ್ತಿದೆ.
ಪೈಚಾರಿನಿಂದ ಸೋಣಂಗೇರಿವರೆಗೆ ರಸ್ತೆ ಅಗಲೀಕರಣವಾಗಿ ಡಾಮರೀಕರಣ ಕೆಲ ಸಮಯದ ಹಿಂದೆ ನಡೆದಿದ್ದು ಈಗ ಅಲ್ಲಲ್ಲಿ ಹೊಂಡ ನಿರ್ಮಾಣವಾಗಿದೆ.
ಸೋಣಂಗೇರಿ ಸಮೀಪ ರಸ್ತೆ ಮಧ್ಯದಲ್ಲಿ ಡಾಮರು ಜಲ್ಲಿ ಎದ್ದು ಹೋಗಿ ಎರಡು ಕಡೆ ದೊಡ್ಡ ಗುಂಡಿಗಳು ನಿರ್ಮಾಣವಾಗಿದೆ.
















ವಾಹನ ಸವಾರರು ಈ ಗುಂಡಿಗಳನ್ನು ತಪ್ಪಿಸಿಕೊಂಡು ಹೋಗುವಾಗ ಎದುರಿನಿಂದ ಬರುವ ವಾಹನಕ್ಕೆ ಡಿಕ್ಕಿ ಹೊಡೆಯುವ ಸಂಭವ ಕೂಡ ಎದುರಾಗಬಹುದು.
ಜನಪ್ರತಿನಿಧಿಗಳು ಈ ರಸ್ತೆಯಿಂದಲೇ ಸಂಚರಿಸುತ್ತಿದ್ದು ರಸ್ತೆಯ ಸ್ಥಿತಿಯನ್ನು ನೋಡಿಯೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.
ವಾಹನ ಸವಾರರಿಗೆ ಇದರಿಂದ ತೊಂದರೆಯಾಗುತ್ತಿದ್ದು ಸಂಬಂಧ ಪಟ್ಟವರು ಕೂಡಲೇ ಈ ಹೊಂಡಗಳಿಗೆ ಮುಕ್ತಿ ನೀಡಬೇಕೆಂದು ಸಾರ್ವಜನಿಕರು ವಿನಂತಿಸಿದ್ದಾರೆ.











