ಎಣ್ಮೂರು ಪ್ರೌಢಶಾಲಾ ದೈ.ಶಿ.ಶಿಕ್ಷಕ ಕಡಬ ನೆಕ್ಕಿಲಾಡಿ 102 ಗ್ರಾಮದ ಪಡೆಜ್ಜಾರು ಕುದ್ವ ಮನೆಯ ರಾಮಚಂದ್ರ ಪಿ.ಎನ್ ನ.17 ರಂದು ಕಡಬ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿಧನರಾದರು.
ಅವರಿಗೆ 55 ವರ್ಷ ವಯಸ್ಸಾಗಿತ್ತು. ಕಳೆದ 2 -3 ವರ್ಷಗಳಿಂದ ಅಸೌಖ್ಯತೆಯಿಂದ ಇದ್ದ ಅವರು ಚಿಕಿತ್ಸೆ ಪಡೆಯುತಿದ್ದರು. ಶಾಲಾ ಕರ್ತವ್ಯಕ್ಕೆ ಹಾಜರಾಗುತಿದ್ದ ಅವರು ಕಳೆದೊಂದು ತಿಂಗಳಿನಿಂದ ಅಸೌಖ್ಯತೆ ಹೆಚ್ಚಾಗಿ ಕರ್ತವ್ಯಕ್ಕೆ ಗೈರು ಹಾಜರಾಗಿದ್ದರು. 1996 ರಲ್ಲಿ ದೈ.ಶಿ.ಶಿಕ್ಷಕರಾಗಿ ಕರ್ತವ್ಯಕ್ಕೆ ಸೇರಿದ್ದ ಅವರು ಮಂಗಳೂರಿನ ಕುಂಪಲ, ಪುತ್ತೂರಿನ ರಾಮಕುಂಜ, ಕೊಂಬಾರು, ಕಡಬ ಜೂನಿಯರ್ ಕಾಲೇಜು ಗಳಲ್ಲಿ ಕೆಲಸ ಮಾಡಿದ್ದರು. 2008 ರಲ್ಲಿ ಪಧೋನ್ನತಿ ಹೊಂದಿ ಸರ್ಕಾರಿ ಪ್ರೌಢಶಾಲೆ ಎಣ್ಮೂರು ಇಲ್ಲಿ ನ ದೈ.ಶಿ.ಶಿಕ್ಷಕರಾದರು. ಕಬಡ್ಡಿ ಯ ರಾಷ್ಟ್ರೀಯ ತೀರ್ಪುಗಾರರಾಗಿದ್ದ ಇವರು ಖೋ,ಖೋ ದ ರಾಜ್ಯ ಮಟ್ಟದ ತೀರ್ಪುಗಾರರಾಗಿದ್ದರು. ಎಣ್ಮೂರು ಶಾಲೆಯ ಆಟದ ಮೈದಾನ ವಿಸ್ತರಣೆಯಲ್ಲಿ ಪ್ರಮುಖವಾಗಿ ಕೆಲಸ ಮಾಡಿದ್ದ ಇವರ ಹಲವು ವಿದ್ಯಾರ್ಥಿಗಳು ರಾಷ್ಟ್ರೀಯ, ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದವರು.















ಮೃತರು ಪತ್ನಿ ಕುಂತೂರು ಪದವು ಸೈಂಟ್ ಜಾರ್ಜ್ ಅನುದಾನಿತ ಪ್ರೌಢಶಾಲಾ ಶಾಲಾ ಶಿಕ್ಷಕಿ ವನಿತಾ ಕುಮಾರಿ, ಮಕ್ಕಳಾದ ಸಿಂಚನಾ ಎಂಜಿನಿಯರ್ ಪದವೀಧರೆ,ಪುತ್ರ ಸೃಜನ್ ದ್ವಿತೀಯ ಪಿ.ಯು ಓದುತಿದ್ದಾರೆ ಮೃತರು ಕುಟುಂಬಸ್ಥರು ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ.










