ಬಿಳಿಯಾರು: ರಾತ್ರಿ ವೇಳೆ ಮನೆಗೆ ನುಗ್ಗಿದ ಕಳ್ಳರು

0

ಏನೂ ಸಿಗದಿದ್ದಾಗ ಕಾಣಿಕೆ ಡಬ್ಬಿಯನ್ನು ಕೊಂಡೊಯ್ದ ಖದೀಮರು

ಅರಂತೋಡು ಗ್ರಾಮದ ಬಿಳಿಯಾರುನಲ್ಲಿ ನವಂಬರ್ ೨೬ ರಂದು ರಾತ್ರಿ ಮನೆಯಲ್ಲಿ ಯಾರೂ ಇಲ್ಲದಿದ್ದ ವೇಳೆ ಕಳ್ಳರು ನುಗ್ಗಿ ಮನೆ ಇಡೀ ತಡಕಾಡಿ ಏನೂ ಸಿಗದಿದ್ದಾಗ ಕಾಣಿಕೆ ಡಬ್ಬಿಯನ್ನು ಕದ್ದುಕೊಂಡು ಹೋದ ಘಟನೆ ವರದಿಯಾಗಿದೆ.

ಬಿಳಿಯಾರು ಬಸ್ ನಿಲ್ದಾಣ ಬಳಿ ಇರುವ ಅಬ್ದುಲ್ಲಾ ಮಾವಿನಕಟ್ಟೆಯವರ ಮನೆಗೆ ರಾತ್ರಿ ಮನೆಯಲ್ಲಿ ಯಾರೂ ಇಲ್ಲದಿದ್ದ ವೇಳೆ ಹಿಂಬಾಗಿಲನ್ನು ಮುರಿದು ನುಗ್ಗಿ ಅಲ್ಲಿರುವ ಕಪಾಟುನ್ನು ಒಡೆದು ಹಾಕಿ ಹುಡುಕಾಡಿದ್ದರೆ. ಆದರೆ ಏನು ಸಿಗದಿದ್ದಾಗ ಅಲ್ಲಿದ್ದ ನಾಲ್ಕು ಕಾಣಿಕೆ ಡಬ್ಬಿಗಳನ್ನು ಕದ್ದೊಯ್ದಿದ್ದಾರೆಂದು ತಿಳಿದುಬಂದಿದೆ.

ಮನೆಯವರು ರಾತ್ರಿ ಪೆರಾಜೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಕ್ಕೆ ತೆರಳಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಮಾಹಿತಿ ತಿಳಿದ ಸುಳ್ಯ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.