ಅಮರ ಸಂಘಟನಾ ಸಮಿತಿ ವತಿಯಿಂದ ಹಾಸನಡ್ಕ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಣೆ

0

ಅಮರ ಸಂಘಟನಾ ಸಮಿತಿ ಸುಳ್ಯ ಇದರ ವತಿಯಿಂದ ಹಾಸನಡ್ಕ ಅಂಗನವಾಡಿ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ ಕಾರ್ಯಕ್ರಮವು ನ.26 ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮರ ಸಂಘಟನಾ ಸಮಿತಿ ಸುಳ್ಯ ಇದರ ಉಪಾಧ್ಯಕ್ಷರಾದ ಸುದೀರ್ ದೇವ ವಹಿಸಿದ್ದರು. ಅಮರಮಡ್ನೂರುಗ್ರಾಮ ಪಂಚಾಯತ್ ನ ಮಾಜಿ ಸದಸ್ಯರಾದ ತಿಮ್ಮಪ್ಪ ಗೌಡ ಕೊಂಡೆಬಾಯಿ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಜಯಪ್ರಕಾಶ್ ದೊಡ್ಡಿಹಿತ್ಲು,ಸವಿತ ಉರುಂಬಿ , ನಳಿನಿ ಕೆ, ಉಪಸ್ಥಿತರಿದ್ದರು. ಹರ್ಷೀತ್ ದಾತಡ್ಕ ಸ್ವಾಗತಿಸಿ, ಕೀರ್ತನ್ ಪಾರೆ ವಂದಿಸಿದರು.

ಪ್ರದೀಪ್ ಬೊಳ್ಳೂರು ಕಾರ್ಯಕ್ರಮ ನಿರೂಪಿಸಿದರು. ಅಮರ ಸಂಘಟನಾ ಸಮಿತಿಯ ಸದಸ್ಯರಾದ ಶಿವಪ್ರಸಾದ್ ದೊಡ್ಡಿಹಿತ್ಲು, ಪ್ರಸಾದ್ ಬೊಳ್ಳೂರು,ಅನಿತಾ ಮಂಜುನಾಥ್ ಕುಕ್ಕುಜಡ್ಕ, ಮನೀಶ್ ಕಡಪಳ, ಮಿಥುನ್ ಕೆರೆಗದ್ದೆ ಉಪಸ್ಥಿತರಿದ್ದರು.