ಸಂಪಾಜೆ :ಮಹಡಿ ಮೇಲಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಮಹಿಳೆ ಮೃತ್ಯು

0

ಮಹಡಿ ಮೇಲಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಮಹಿಳೆ ಮೃತಪಟ್ಟ ಘಟನೆ ಸಂಪಾಜೆಯ ಚೌಕಿ ಬಳಿ ನ.27 ರಂದು ಸಂಭವಿಸಿದೆ. ಸಂಪಾಜೆಯ ಚೌಕಿ ಬಳಿಯ ಕಮಲರವರು ಮಹಡಿಯಿಂದ ಇಳಿದುಕೊಂಡು ಬರುತ್ತಿರುವಾಗ ಕಾಲು ಜಾರಿ ಬಿದ್ದು ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ನೌಶಾದ್ ಎನ್ ಬಿ ಎಸ್ ರವರು ತಾಜುದ್ದೀನ್ ಟರ್ಲಿ ಯವರ ಆಂಬುಲೆನ್ಸ್ ಮೂಲಕ ಸುಳ್ಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರೆಂದು ತಿಳಿದು ಬಂದಿದೆ.

ಮೂಲತಃ ಚೆಂಬು ಗ್ರಾಮದ ಉಂಬಳೆ ನಿವಾಸಿಯಾಗಿರುವ ಕಮಲರಿಗೆ 85 ವರ್ಷ ವಯಸ್ಸಾಗಿತ್ತು. ಮೃತರು ಓರ್ವ ಪುತ್ರ ನಾರಾಯಣ, ಇಬ್ಬರು ಪುತ್ರಿಯರು ಹಾಗೂ ಬಂಧುಗಳನ್ನು,ಕುಟುಂಬಸ್ಥರನ್ನು ಅಗಲಿದ್ದಾರೆ.