Home Uncategorized ಅಜ್ಜಾವರ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ : ಕಣದಿಂದ ಹಿಂದೆ ಸರಿದ ರಾಹುಲ್ ಅಡ್ಪಂಗಾಯ...

ಅಜ್ಜಾವರ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ : ಕಣದಿಂದ ಹಿಂದೆ ಸರಿದ ರಾಹುಲ್ ಅಡ್ಪಂಗಾಯ ತಂಡ

0

ಅವಿರೋಧ ಆಯ್ಕೆಗೆ ನಮ್ಮ ಸಹಕಾರ : ರಾಹುಲ್ ಅಡ್ಪಂಗಾಯ

ಜೂ. 21ರಂದು ನಡೆಯುವ ಅಜ್ಜಾವರ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ ನಾಮಪತ್ರ ಸಲ್ಲಿಸಿದ್ದ ಹಾಲಿ ಅಧ್ಯಕ್ಷ ರಾಹುಲ್ ಅಡ್ಪಂಗಾಯ ತಂಡ ಸ್ಪರ್ಧಾ ಕಣದಿಂದ ಹಿಂದೆ ಸರಿದಿದೆ. ನಮ್ಮ ತಂಡವು ಸ್ಪರ್ಧೆಯಲ್ಲಿ ಭಾಗವಹಿಸದೇ ಅವಿರೋಧ ಆಯ್ಕೆಗೆ ಸಹಕರಿಸುವುದಾಗಿ ಚುನಾವಣಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ.

ಈ ಕುರಿತು ಚುನಾವಣಾಧಿಕಾರಿಗೆ ಪತ್ರ ಬರೆದಿರುವ ರಾಹುಲ್ ಅಡ್ಪಂಗಾಯರು “ಅಜ್ಜಾವರ ಹಾಲು ಉತ್ಪಾದಕರ ಸಹಕಾರ ಸಂಘವು ಕೆಲವೇ ವರ್ಷಗಳ ಹಿಂದೆ ಪ್ರಾರಂಭವಾದ ನೂತನ ಸಂಸ್ಥೆಯಾಗಿದ್ದು ಇನ್ನಷ್ಟೇ ಅಭಿವೃದ್ಧಿಯಲ್ಲಿ ಮುಂದುವರಿಯಬೇಕಾಗಿರುವುದರಿಂದ ಚುನಾವಣೆ ನಡೆಯದೆ ಒಮ್ಮತದ ಆಡಳಿತ ಮಂಡಳಿ ತರುವಲ್ಲಿ ಶ್ರಮಿಸಿದೆವು. ಆದರೆ ಸರಿಯಾದ ಒಮ್ಮತ ಮೂಡಿ ಬಾರದ ಕಾರಣ ದಿನಾಂಕ 21.06.2026ರಂದು ಅಜ್ಜಾವರ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆಯಲಿರುವ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆವಾಗುವಂತೆ ಅನುಕೂಲವಾಗಲು ನಮ್ಮ ತಂಡವು ಚುನಾವಣಾ ಸ್ಪರ್ಧೆಯಲ್ಲಿ ಭಾಗವಹಿಸದೇ ಇರಲು ತೀರ್ಮಾನಿಸಿರುತ್ತೇವೆ. ಈ ಕೆಳಕಂಡ ಸ್ಪರ್ದಿಗಳಾದ ಸಾಮಾನ್ಯ ಕ್ಷೇತ್ರದಿಂದ ರಾಹುಲ್ ಅಡಂಗಾಯ, ಬಾಲಚಂದ್ರ, ಸುಲೋಚನಾ ರವೀಶ್ ಮಾವಿನಪಳ್ಳ, ಜನಾರ್ಧನ ನಾರಾಲು, ಯತೀರಾಜ್ ಅಡಂಗಾಯ ಹಾಗೂ ಮಹಿಳಾ ಮೀಸಲು ಸ್ಥಾನದಿಂದ ಶ್ವೇತಾ ಶಿರಾಜೆಯವರು ನಾಮಪತ್ರ ಸಲ್ಲಿಸಿದ್ದೆವು. ಆದರೆ ನಾವು ಈ ಚುನಾವಣಾ ಸ್ಪರ್ಧೆಯಲ್ಲಿ ಭಾಗವಹಿಸದೇ ಇರುವುದನ್ನು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇವೆ. ಆಯ್ಕೆಯಾಗುವ ಎಲ್ಲರಿಗೂ ನಾವು ಮುಂದೆ ಸಹಕಾರ ನೀಡುತ್ತೇವೆ ಎಂದು ಅವರು ತಿಳಿಸಿದ್ದಾರೆ. ಈ ಪ್ರತಿಯನ್ನು ಸುದ್ದಿ ಪತ್ರಿಕೆಗೂ ಅವರು ಕಳುಹಿಸಿ‌ ಕೊಟ್ಟಿದ್ದಾರೆ.

NO COMMENTS

error: Content is protected !!
Breaking