ಕೊಲ್ಲಮೊಗ್ರು  – ಹರಿಹರ ಸಹಕಾರಿ ಸಂಘದಿಂದ ಕಲ್ಮಕಾರು ಶಾಲೆಗೆ ಕಂಪ್ಯೂಟರ್ ಖರೀದಿಗೆ ಸಹಾಯಧನ

0

 

ಸರಕಾರಿ ಹಿ.ಪ್ರಾ.ಶಾಲೆ ಕಲ್ಮಕಾರು ಇಲ್ಲಿಗೆ ಕೊಲ್ಲಮೊಗ್ರು ಹರಿಹರ ಪ್ರಾ.ಕೃ.ಪ.ಸ.ಸಂಘದಿಂದ ಕಂಪ್ಯೂಟರ್ ಖರೀದಿಗೆ 10 ಸಾವಿರ ಸಹಾಧನ ಆ.26 ನೀಡಲಾಯಿತು.

ಸಹ ಶಿಕ್ಷಕ ಅರವಿಂದ ಕಜೆ ಚೆಕ್ ಸ್ವೀಕರಿಸಿದರು. ಸಹಕಾರಿ ಸಂಘದ ಅಧ್ಯಕ್ಷ ಹರ್ಷಕುಮಾರ್ ದೇವಜನ, ಕೊಲ್ಲಮೊಗ್ರು ಶಾಖಾ ಪ್ರಭಾರ ವ್ಯವಸ್ಥಾಪಕ ಚಂದ್ರಶೇಖರ ಬಟ್ಟೋಡಿ, ಸಿಬ್ಬಂದಿಗಳಾದ ಜನಾರ್ದನ ಗುಂಡಿಹಿತ್ಲು, ಬೆಳ್ಯಪ್ಪ ಗೌಡ ಮಣಿಯಾನ ಮನೆ ಸಿಬ್ಬಂದಿಗಳು ಉಪಸ್ಥಿತರಿದ್ದರು.