ಸೆ. 26ರಿಂದ ಅ. 4: ಕುಂಜತ್ತಾಡಿ ಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

0

ಬಳ್ಪ ಗ್ರಾಮದ ಕುಂಜತ್ತಾಡಿ ಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವಗಳು ಸೆ. 26ರಿಂದ ಅ. 4ರ ತನಕ ಜರಗಲಿದೆ. ಪ್ರತೀ ದಿನ ಮಧ್ಯಾಹ್ನ ಮತ್ತು ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ಸೆ. 26ರಂದು ಗಣಪತಿ ಹವನ, ಸಂಜೆ ದುರ್ಗಾ ಪೂಜೆ ನಡೆಯಲಿದೆ. ಸೆ.27ರಂದು ಸಂಜೆ ದುರ್ಗಾ ಪೂಜೆ, ಸೆ. 28ರಂದು ದುರ್ಗಾ ನಮಸ್ಕಾರ ಪೂಜೆ, ಸೆ. 29ರಂದು ಬೆಳಿಗ್ಗೆ ವನದುರ್ಗಾ ಹೋಮ, ಸಂಜೆ ಆಶ್ಲೇಷ ಬಲಿ, ದುರ್ಗಾಪೂಜೆ ನಡೆಯಲಿದೆ. ಅ. 4ರಂದು ಬೆಳಿಗ್ಗೆ ಖದಿರು ಕಟ್ಟುವುದು, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಮಹಾನವಮಿ ಮಹೋತ್ಸವ, ಹೊಸ್ತಾರೋಗಣೆ, ಅಕ್ಷರಾಭ್ಯಾಸ ನಡೆಯಲಿದೆ. ಸಂಜೆ 7.00 ಗಂಟೆಯಿಂದ ಸಾಮೂಹಿಕ ದುರ್ಗಾ ನಮಸ್ಕಾರ ಪೂಜೆ, ಮಹಾಪೂಜೆ, ದೇವತಾ ಪ್ರಾರ್ಥನೆ, ಮಂತ್ರಾಕ್ಷತೆ ನಡೆಯಲಿದೆ. ರಾತ್ರಿ ಆಯುಧ ಪೂಜೆ ನಡೆಯಲಿದೆ. ಭಕ್ತಾದಿಗಳು ನವರಾತ್ರಿ ಉತ್ಸವಗಳಲ್ಲಿ ಪಾಳ್ಗೊಂಡು ಶ್ರೀ ದೇವಿಯ ಕೃಪೆಗೆ ಪಾತ್ರರಾಗುವಂತೆ ಆಡಳಿತ ಸಮಿತಿ ಅಧ್ಯಕ್ಷ ಎ. ಬಾಲಕೃಷ್ಣ ರೈ ಬಿರ್ಕಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಕುಳ ಮತ್ತು ಪ್ರಧಾನ ಅರ್ಚಕರಾದ ರಘುರಾಮ ಅಮ್ಮಣ್ಣಾಯ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.