ಪೆರಾಜೆ ಗ್ರಾಮ ಪಂಚಾಯತ್ನ ಒಂದು ಸ್ಥಾನಕ್ಕೆ ನಡೆದ ಉಪಚುನಾವಣೆಯ ಮತ ಎಣಿಕೆ ಇಂದು ಮಡಿಕೇರಿಯ ತಾಲೂಕು ಕಚೇರಿಯಲ್ಲಿ ನಡೆದಿದ್ದು, ಈ ಸ್ಥಾನವನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿ ಪ್ರವೀಣ್ ಮಜಿಕೋಡಿ ೬೩ ಮತಗಳಿಂದ ಗೆದ್ದುಕೊಂಡಿದ್ದಾರೆ.
ಈ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಗಾಂಧಿಪ್ರಸಾದ್ ಅವರ ಅಕಾಲಿಕ ನಿಧನದಿಂದ ಸ್ಥಾನ ತೆರವುಗೊಂಡಿತ್ತು. ಈ ಬಾರಿ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗಾಂಧಿಪ್ರಸಾದ್ ಅವರ ಪತ್ನಿ ತುಳಸಿ ಸ್ಪರ್ಧಿಸಿದ್ದು ಇವರಿಗೆ ಕಾಂಗ್ರೆಸ್ ಬೆಂಬಲ ನೀಡಿತ್ತು. ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಪ್ರವೀಣ್ ಮಜಿಕೋಡಿ ಹಾಗೂ ಪಕ್ಷೇತರರಾಗಿ ಜಯಪ್ರಕಾಶ್ ಹೊದ್ದೆಟ್ಟಿ ಕಣದಲ್ಲಿದ್ದರು. ಪ್ರವೀಣ್ 296 ಮತ ಪಡೆದು ವಿಜಯಿಯಾದರು. ತುಳಸಿಯವರಿಗೆ 239 ಮತ ಲಭಿಸಿತ್ತು. ಜಯಪ್ರಕಾಶ್ ಹೊದ್ದೆಟ್ಟಿಯವರಿಗೆ 17 ಮತ ದೊರೆತಿತ್ತು. ಪ್ರವೀಣ್ ನೂತನ ಸದಸ್ಯರಾಗಿ ಆಯ್ಕೆಗೊಂಡರು.
ವಿಜಯಿ ಅಭ್ಯರ್ಥಿಯನ್ನು ವಿರಾಜಪೇಟೆ ಶಾಸಕ ಕೆ.ಜಿ.ಭೋಪಯ್ಯ ಅಭಿನಂದಿಸಿದರು.