ಸುಣ್ಣಮೂಲೆ: ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ದಶ ವಾರ್ಷಿಕ ಸ್ವಲಾತ್ ಮಜ್ಲಿಸ್

0

ಕನಕಮಜಲು ಗ್ರಾಮದ ಸುಣ್ಣಮೂಲೆ ಆಹ್ಮದುಲ್ ಬದವಿ ಜುಮಾ ಮಸೀದಿಯ ಜಮಾತ್ ಕಮಿಟಿ ಹಾಗೂ ಖಾಝಿ ಖುರ್ರತು ಸ್ಸಾದಾತ್ ಕೂರ ತಂಙಳ್ ಅವರ ನಿರ್ದೇಶನದಂತೆ ಪ್ರತೀ ತಿಂಗಳು ನಡೆಸಿಕೊಂಡು ಬರುವ ಸ್ವಲಾತ್ ಮಜ್ಲಿಸ್ ದಶ ವಾರ್ಷಿಕ ಕಾರ್ಯಕ್ರಮವು ಜೂ.27ರಂದು ಜರಗಿತು.

ಸ್ಥಳೀಯ ಖತೀಬರಾದ ಅಬ್ದುಲ್ ನಾಸಿರ್ ಸಹದಿ ಅಲ್ ಫುರ್ಖಾನಿ, ಅವರು ಮಜ್ಲಿಸ್ ಗೆ ನೇತೃತ್ವ ನೀಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಜಮಾಹತ್ ಉಪಾಧ್ಯಕ್ಷ ಅಬ್ದುಲ್ ರಹ್ಮಾನ್ ಶಾಲಿಮಾರ್ ಅಧ್ಯಕ್ಷತೆ ವಹಿಸಿದ್ದರು. ಅಬೂಬಕ್ಕರ್ ಫೈಝಿ ಕುಂಬ್ಡಾಜೆ ಮುಖ್ಯ ಪ್ರಾಭಾಷಣ ಮಾಡಿದರು. ಮುಹಲ್ಲಿಂ ಶಮೀಮ್ ಸಹದಿ ಪಳ್ಳತ್ತೂರು, ಅಬ್ದುಲ್ ರಹ್ಮಾನ್ ಸಹದಿ. ಸ್ವಾಲಿಹ್ ಹನೀಫ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಜಮಾಹತ್ ಕಮಿಟಿ ಪ್ರಧಾನ ಕಾರ್ಯದರ್ಶಿ ಕೆ. ಎಂ .ಅಬ್ದುಲ್ ಹಮೀದ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಎಸ್.ಎಸ್.ಎಫ್. ಯುನಿಟ್‌ ಅಧ್ಯಕ್ಷ ಟಿ.ಎಂ. ಅಬ್ದುಲ್ ಕರೀಮ್ ವಂದಿಸಿದರು.
ಸ್ತ್ರೀಯರಿಗೆ ಸ್ಥಳಾವಕಾಶ ಮತ್ತು ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು.