ಬೆಳ್ಳಾರೆ : ನವಗ್ರಾಮದಲ್ಲಿ ಬರೆ ಕುಸಿತ – ಅಪಾಯದಲ್ಲಿ ಮನೆ

0

ಬೆಳ್ಳಾರೆ ಗ್ರಾಮದ ನವಗ್ರಾಮದಲ್ಲಿ ಇಂದು ಸುರಿದ ಭಾರೀ ಮಳೆಗೆ ಬರೆ ಕುಸಿದು ಬಿದ್ದಿದ್ದು ಮನೆಯೊಂದು ಅಪಾಯದ ಸ್ಥಿತಿಯಲ್ಲಿದೆ.


ಜಯರಾಮ ಉಮಿಕ್ಕಳ ಎಂಬವರ ಮನೆಯ ಎದುರಿನ ಬರೆ ಕುಸಿದು ಬಿದ್ದ ಪರಿಣಾಮ ಮನೆ ಅಪಾಯದಲ್ಲಿದೆ.


ಮಣ್ಣು ಜರಿದು ರಸ್ತೆಗೆ ಬಿದ್ದ ಪರಿಣಾಮ ಚಾವಡಿಬಾಗಿಲು ಕಡೆಗೆ ಹೋಗುವ ರಸ್ತೆ ಕೂಡ ಬಂದ್ ಆಗಿರುವುದಾಗಿ ತಿಳಿದು ಬಂದಿದೆ.