ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಯವರ ಪರವಾಗಿ ಆಲೆಟ್ಟಿ ಕಾಂಗ್ರೆಸ್ ಸಮಿತಿ ವತಿಯಿಂದ ನಾಗಪಟ್ಟಣ ದೇವಸ್ಥಾನದಲ್ಲಿ ವಿಶೇಷ ಪೂಜೆ

0

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 99 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ರಾಹುಲ್ ಗಾಂಧಿಯವರಿಗೆ ಶುಭ ಕೋರಿ ಆಲೆಟ್ಟಿ ಗ್ರಾಮ ಕಾಂಗ್ರೆಸ್ ಸಮಿತಿ ವತಿಯಿಂದ ನಾಗಪಟ್ಟಣ ಸದಾಶಿವ ದೇವಳದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಎಲ್ಲರಿಗೂ ಸಿಹಿ ತಿಂಡಿ ವಿತರಿಸಲಾಯಿತು.


ನಗರ ಪಂಚಾಯತ್ ಸದಸ್ಯ ಎಂ. ವೆಂಕಪ್ಪ ಗೌಡ, ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಪಿ. ಎಸ್ ಗಂಗಾಧರ, ರಾಜ್ಯ ಅರಭಾಷೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಸುಳ್ಯ ಮಹಿಳಾ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಗೀತಾ ಕೊಲ್ಚಾರು, ಆಲೆಟ್ಟಿ ಗ್ರಾಮ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸತ್ಯಕುಮಾರ ಆಡಿಂಜ, ಗ್ರಾಮ ಪಂಚಾಯತ್ ಸದಸ್ಯರಾದ ಧರ್ಮಪಾಲ ಕೊಯಿಂಗಾಜೆ, ಕುಸುಮ ಬಿಲ್ಲರಮಜಲು, ಮೀನಾಕ್ಷಿ ಕುಡೇಕಲ್ಲು, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಪರಿವಾರಕಾನ, ಅರೆ ಭಾಷೆ ಸಾಹಿತ್ಯ ಅಕಾಡೆಮಿ ಇದರ ನಿರ್ದೇಶಕಿ ಲತಾ ದೇವಿಪ್ರಸಾದ, ತೇಜಕುಮಾರ ಬಡ್ಡಡ್ಕ, ನಗರ ಪಂಚಾಯತ್ ನಾಮನಿರ್ದೇಶಿತ ಸದಸ್ಯ ರಾಜು ಪಂಡಿತ್ ಸುಳ್ಯ, ಆನಂದ ನಾಗಪಟ್ಟಣ, ಜೀವ ರತ್ನ ನಾಗಪಟ್ಟಣ, ಗಣೇಶ್ ನಾಗಪಟ್ಟಣ, ಕುಕ್ಕಪ್ಪ ರೈ ಅರಂಬೂರು, ನಾರಾಯಣ ರೈ ಅರಂಬೂರು, ರೇವತಿ ನಾಗಪಟ್ಟಣ, ದೇವಿ ನಾಗಪಟ್ಟಣ, ಮಾಲಾ ನಾಗಪಟ್ಟಣ, ವಿನೋದ ಅಜ್ಜಾವರ, ಕೇಶವ ಮೊರಂಗಲ್ಲು, ಚಂದ್ರಶೇಖರ ಕೆ ವಿ, ಸತ್ಯನಾರಾಯಣ ಕುಡೇಕಲ್ಲು, ರಾಮಕೃಷ್ಣ ಮೂಲೆ ಬಡ್ದಡ್ಕ, ಪುರುಷೋತ್ತಮ ಬಡ್ಡಡ್ಕ, ರಮೇಶ ಬಡ್ಡಡ್ಕ ಮತ್ತಿತರರು ಉಪಸ್ಥಿತರಿದ್ದರು.