ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞರ ನೇಮಕ ಮಾಡವಲ್ಲಿ ಶಾಸಕರು ಪ್ರಯತ್ನಿಸಲಿ

0

ಸುಳ್ಯ ಸರಕಾರಿ ಆಸ್ಪತ್ರೆಗೆ ಪ್ರಸೂತಿ ತಜ್ಞರ‌ ನೇಮಕ ಮಾಡವಲ್ಲಿ ಸುಳ್ಯದ ಶಾಸಕರು ಪ್ರಯತ್ನ ಪಡಬೇಕು” ಎಂದು ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ಅಧ್ಯಕ್ಷ ಸತೀಶ್ ಬೂಡುಮಕ್ಕಿ ತಿಳಿಸಿದ್ದಾರೆ.

ತಾಲೂಕು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಸೂತಿ ತಜ್ಞರ ಮೇಲೆ‌ ಬಂದ ಆರೋಪದ ಬಳಿಕ ಅವರು ಕರ್ತವ್ಯಕ್ಕೆ ಬರುತ್ತಿಲ್ಲ ಎಂದು ಸರ್ಕಾರದ ಮಟ್ಟದಲ್ಲಿ ಜವಾಬ್ದಾರಿ ಇರುವವರು ಜನರಿಗೆ ಅತೀ ಅಗತ್ಯ ಇರುವ ಈ ವೈದ್ಯಕೀಯ ಸೇವೆಯನ್ನು ಖಾಲಿ ಇಟ್ಟುಕೊಂಡು ಸಮಸ್ಯೆಗೆ ಉತ್ತರ ಹುಡುಕುವುದರಲ್ಲಿ ಸಮಯ ಕಳೆಯುತ್ತಿರುವುದು, ಜನರನ್ನು ಅತಂತ್ರ ಸ್ಥಿತಿಯಲ್ಲಿ ಪರದಾಡುವಂತೆ ಮಾಡುವುದು ನ್ಯಾಯವಲ್ಲ. ಚಿಕಿತ್ಸೆಗಾಗಿ ಅಸಹಾಯಕ ಸ್ಥಿತಿಯಲ್ಲಿ ಸರ್ಕಾರಿ ಆಸ್ಪತ್ರೆಗೆ ಬರುವವರು ಆಸ್ಪತ್ರೆಯಲ್ಲಿನ ಕೊರತೆ ಬಗ್ಗೆ ಪ್ರಶ್ನೆ ಮಾಡುವ ಸ್ಥಿತಿಯಲ್ಲಿ ಇರಲಾರರು. ಸೇವೆಯಲ್ಲಿ ಮಾನವಿಯತೆಯ ದೃಷ್ಟಿಯಿರಲಿ.ಆರೋಗ್ಯ ವಿಷಯದಲ್ಲಿ ಜನರಿಗಾಗುತ್ತಿರುವ ಸಮಸ್ಯೆಯನ್ನು ಸುದ್ದಿ ಮಾಧ್ಯಮಗಳ ಮೂಲಕ ಜನಪ್ರತಿನಿಧಿಗಳು ಕಂಡು ಮೌನವಾಗಿರುವುದು ಜನರ ತಾಳ್ಮೆ ಪರೀಕ್ಷಿಯಂತಿದೆ.ಶಾಸಕರ ಮೌನ ಸರಿಯಲ್ಲ. ಸುಳ್ಯ ತಾಲೂಕು ಅತೀ ಹೆಚ್ಚು ಬಡವರು ಇರುವ ಪ್ರದೇಶ ಈ ಸರ್ಕಾರಿ ಆಸ್ಪತ್ರೆಯನ್ನ ನಂಬಿಬರುವವರು ಬಂದಾಗ ಜನರನ್ನ ಅಲ್ಲಿ ಇಲ್ಲಿ ಅಲೆದಾಡಿಸಿ ಪ್ರಾಣಹಾನಿ ಸಂಭವಿಸುವುದಕ್ಕೆ ಅವಕಾಶ ಕಲ್ಪಿಸದೆ ಬಡತನದ ಅರಿವು ಇರುವಂತಹ ಶಾಸಕರಾದ ಭಾಗೀರಥಿಯವರು ಸುಳ್ಯದ ತಾಲೂಕು ಆಸ್ಪತ್ರೆಯಲ್ಲಿ ಎದುರಾಗಿರುವ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯ ಸರ್ಕಾರದ ಗಮನ ಸೆಳೆದು ಕೂಡಲೇ ಆಸ್ಪತ್ರೆಯಲ್ಲಿ ಖಾಯಂ ಪ್ರಸೂತಿ ತಜ್ಞರು&ಸರ್ಜನ್ ತಜ್ಞರ ಕೂಡಲೇ ನೇಮಕವಾಗುವಂತೆ ಹಠಬಿದ್ದು ಪ್ರಯತ್ನ ನಡೆಸಬೇಕೆಂದು ಆಗ್ರಹಿಸುತ್ತೇವೆ ಎಂದು‌ಅವರು‌ಹೇಳಿಕೆಯಲ್ಲಿ ತಿಳಿಸಿದ್ದಾರೆ.