ಸುದೀಪ್ ರೈ ಬೆಳ್ಳಾರೆ ಸಿ.ಎ. ಇಂಟರ್ ಮೀಡಿಯೇಟ್ ಪರೀಕ್ಷೆಗಳಲ್ಲಿ ಉತ್ತೀರ್ಣ

0

ಬೆಳ್ಳಾರೆಯ ಕಾವಿನಮೂಲೆ ನಿವಾಸಿ ಸುದೀಪ್ ರೈ ಸಿ.ಎ. ಇಂಟರ್ ಮೀಡಿಯೆಟ್ ಎರಡೂ ಪರೀಕ್ಷೆಗಳಲ್ಲಿ ತೇರ್ಗಡೆಗೊಂಡಿದ್ದಾರೆ.
ಸವಣೂರು ವಿದ್ಯಾರಶ್ಮಿ ವಿದ್ಯಾಲಯ ಮತ್ತು ಮುಡಿಪು ಜವಾಹರ್ ವಿದ್ಯಾಲಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಮೂಡಬಿದಿರೆಯ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಪಿ.ಯು. ಶಿಕ್ಷಣವನ್ನು ಪಡೆದು ಮಂಗಳೂರಿನ ತ್ರಿಶಾ ಸಂಸ್ಥೆಯಲ್ಲಿ ಸಿ.ಎ. ಇಂಟರ್ ಮೀಡಿಯೆಟ್ ಹಂತವನ್ನು ಪೂರ್ಣಗೊಳಿಸಿದ್ದಾರೆ. ಇದರೊಂದಿಗೆ ಮಂಗಳೂರಿನ ವಿಶ್ವವಿದ್ಯಾಲಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪಡೆದಿರುತ್ತಾರೆ. ಇವರು ಬೆಳ್ಳಾರೆಯ ಗುರು ಆರ್ಟ್ಸ್‌ ನ ಯಕ್ಷಗುರು ವಿ. ವಾಸುದೇವ ರೈ ಮತ್ತು ಶ್ರೀಮತಿ ಶರ್ಮಿಳಾ ವಿ. ರೈ ದಂಪತಿಗಳ ಪುತ್ರ