ಬೆಳ್ಳಾರೆ : ಮಹಿಳೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಆರೋಪಿಗೆ ನ್ಯಾಯಾಂಗ ಬಂಧನ

0

ಬೆಳ್ಳಾರೆಯ ಎ.ಪಿ.ಎಂ.ಸಿ ಸಂತೆ ಮಾರುಕಟ್ಟೆಯಲ್ಲಿ ಮಹಿಳೆಯ ಕೊಲೆ ಮಾಡಿದ ಆರೋಪಿಯನ್ನು ಬೆಳ್ಳಾರೆ ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿರುವುದಾಗಿ ತಿಳಿದು ಬಂದಿದೆ.

ಪಾಟಾಜೆಯ ಸುಂದರ ಎಂಬವರ ಪತ್ನಿ ನಳಿನಿ ಪಾಟಾಜೆ ಎಂಬವರನ್ನು ಜೂ.09 ರಂದು ರಾತ್ರಿ ಕಲ್ಲಿನಿಂದ ಎತ್ತಿ ಹಾಕಿ ಕೊಲೆ ಮಾಡಲಾಗಿದ್ದು ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


ಕೊಲೆ ಆರೋಪಿ ಕಲ್ಮಡ್ಕದ ವೆಂಕಪ್ಪ ನಾಯ್ಕ ಗೋಳಿಯಡ್ಕ ಎಂಬವರ ಮಗ ಜಯ ಕುಮಾರ್ ಎಂಬವನನ್ನು ಬೆಳ್ಳಾರೆ ಪೊಲೀಸರು ಜೂ.11 ರಂದು ಬಂಧಿಸಿದ್ದು ಬಳಿಕ ಸ್ಥಳ ಮಹಜರು ನಡೆಸಿದ್ದರು.


ಇಂದು ಪೊಲೀಸರು ಆರೋಪಿಯನ್ನು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿರುವುದಾಗಿ ತಿಳಿದು ಬಂದಿದೆ.