ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ : ರಾಜ್ಯ ಸರಕಾರದ ವಿರುದ್ಧ ಸುಳ್ಯದಲ್ಲಿ ಬಿಜೆಪಿ ಪ್ರತಿಭಟನೆ

0

ರಾಜ್ಯ ಸರಕಾರ ಪೆಟ್ರೋಲ್, ಡಿಸೇಲ್ ಮೇಲಿನ ತೆರಿಗೆ ಏರಿಸಿರುವುದನ್ನು ವಿರೋಧಿಸಿ ಸುಳ್ಯ ಬಿಜೆಪಿ ಮಂಡಲ ಸಮಿತಿಯ ವತಿಯಿಂದ ಸುಳ್ಯದಲ್ಲಿ ಪ್ರತಿಭಟನಾ ಸಭೆ ನಡೆಯಿತು.
ಸುಳ್ಯದ ಖಾಸಗಿ ಬಸ್ ನಿಲ್ದಾಣದಲ್ಲಿ ಇಂದು ಸೇರಿದ ಬಿಜೆಪಿ ಮಂಡಲ ಸಮಿತಿಯವರು ರಾಜ್ಯ ಸರಕಾರದ ವಿರುದ್ಧ ಘೋಷಣೆಯನ್ನು ಕೂಗಿದರು. ಕೈಯಲ್ಲಿ ಚೆಂಬು ಹಾಗೂ ತೆಂಗಿನ ಚಿಪ್ಪಿಯನ್ನು ಹಿಡಿದ ಬಿಜೆಪಿಗರು ರಾಜ್ಯ ಸರಕಾರ ಜನತೆಗೆ ನೀಡಿದ್ದು ಇದನ್ನೇ ಎಂದು ವ್ಯಂಗ್ಯ ವಾಡಿದರು. ಅಲ್ಲದೆ ಪೆಟ್ರೋಲ್, ಡೀಸೆಲ್ ಹಾಕು ದುಡ್ಡಿಲ್ಲ .. ದುಡ್ಡಿಲ್ಲ.. ಅಯ್ಯೊಯ್ಯೋ ಅನ್ಯಾಯ ಎಂದು ಘೋಷಣೆ ಕೂಗಿದರು.


ಪ್ರತಿಭಟನೆಯಲ್ಲಿ ಮಾತನಾಡಿದ ಶಾಸಕಿ ಭಾಗೀರಥಿ ಮುರುಳ್ಯರು, ರಾಜ್ಯದ ಸಿದ್ಧರಾಮಯ್ಯರ ಸರಕಾರ ಪೆಟ್ರೋಲ್ - ಡೀಸೆಲ್ ಬೆಲೆ ಏರಿಕೆಯನ್ನು ಮಾಡುವ ಮೂಲಕ ಮತ್ತೊಂದು ಗ್ಯಾರಂಟಿಯನ್ನು ನೀಡಿದ್ದಾರೆ. ಇದರಿಂದಾಗಿ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿದ್ದು ಬಡವರ ಹೊಟ್ಟೆಗೆ ಹೊಡೆಯುವಂತೆ ಕಾಂಗ್ರೆಸ್ ಮಾಡಿದೆ. ಇದರಿಂದ ಜನರು ಸಮಸ್ಯೆಯಲ್ಲಿ ಸಿಲುಕಿದ್ದರೂ ರಾಜ್ಯ ಸರಕಾರ ನಿದ್ದೆಗೆ ಜಾರಿದಂತಿದ್ದೆ. ಈಗ ಮಾಡಿರುವ ಬೆಲೆ ಏರಿಕೆಯನ್ನು ತಕ್ಷಣ ಹಿಂಪಡೆಯದಿದ್ದರೆ ಬೃಹತ್ ಪ್ರತಿಭಟನೆ ಮಾಡುವುದಾಗಿ ಅವರು ಎಚ್ಚರಿಕೆ ನೀಡಿದರು. ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಮಾತನಾಡಿ,ಚುನಾವಣೆಯ ಸಂದರ್ಭ ಕಾಂಗ್ರೆಸ್‌ನವರು ಚೆಂಬು ನ ಚಿತ್ರ ಬಳಸಿ ಜಾಹೀರಾತು ನೀಡಿದ್ದರು. ಅದೇ ಚೆಂಬನ್ನು ಇಂದು ಬೆಲೆ ಏರಿಕೆ ಮಾಡುವುದರ ಮೂಲಕ ಜನರ ಕೈಗೆ ಕಾಂಗ್ರೆಸ್ ನೀಡಿದೆ. ಇದಕ್ಕೆ ಜನರು ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ” ಎಂದು ಹೇಳಿದರು.


ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ ಮಾತನಾಡಿ, ಚುನಾವಣೆ ಮುಗಿದ ತಕ್ಷಣ ಬೆಲೆ ಏರಿಕೆ ಮಾಡುವ ಮೂಲಕ ಸರಕಾರ ಜನರಿಗೆ ಚೆಂಬು ನೀಡಿ, ರಾಷ್ಟ್ರಮಟ್ಟದಲ್ಲಿ ರಾಜ್ಯದ ಮರ್ಯಾದೆ ಹರಾಜಾಗುವಂತೆ ಕಾಂಗ್ರೆಸ್ ಸರಕಾರ ಮಾಡಿದೆ” ಎಂದು ಹೇಳಿದರು.


ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ ಮಾತನಾಡಿ, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಸುಳ್ಳು ಹೇಳಿಯೇ ಗೆದ್ದದ್ದು ಎಂದು ಡಿಸಿಎಂ ಶಿವಕುಮಾರ್ ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್‌ನ ಸುಳ್ಳನ್ನು ಜನರು ಕೂಡಾ ಅರ್ಥೈಯಿಸಿಕೊಂಡಿದ್ದು ದೇಶದಲ್ಲಿ ಕಾಂಗ್ರೆಸ್ ನಿರ್ಣಾಮದ ಕಾಲ ಸನ್ನಿಹಿತವಾಗಿದೆ ಎಂದು ಹೇಳಿದರು. ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷ ಎ.ವಿ. ತೀರ್ಥರಾಮ ಮಾತನಾಡಿ,ಬೆಲೆ ಏರಿಕೆಯ ಮೂಲಕ ದಬ್ಬಾಳಿಕೆಯ ಆಡಳಿತವನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ” ಎಂದು ಹೇಳಿದರು.

ಬಿಜೆಪಿ ಮಂಡಲ ಸಮಿತಿ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಶ್ರೀಮತಿ ಇಂದಿರಾ ಬಿ.ಕೆ., ಸುರೇಶ್ ಕಣೆಮರಡ್ಕ, ಸೋಮನಾಥ ಪೂಜಾರಿ, ಸುದರ್ಶನ ಪಾತಿಕಲ್ಲು, ಅಶೋಕ್ ಅಡ್ಕಾರು, ಚಂದ್ರಜಿತ್ ಮಾವಜಿ, ಎ.ಟಿ.ಕುಸುಮಾಧರ, ಸರೋಜಿನಿ ಪೆಲತಡ್ಕ, ಕಿಶೋರಿ ಶೇಟ್, ಭಾರತಿ ಅರಂತೋಡು, ಪುಷ್ಪಾ ಮೇದಪ್ಪ, ಶಾರದಾ ಡಿ ಶೆಟ್ಟಿ, ಶೀಲಾ ಕುರುಂಜಿ, ಶಶಿಕಲಾ ನೀರಬಿದಿರೆ, ಶಿಲ್ಪಾ ಸುದೇವ್, ಉಷಾ ಗಂಗಾಧರ್, ಪ್ರವಿತಾ ಪ್ರಶಾಂತ್, ವಿಕ್ರಮ್ ಅಡ್ಪಂಗಾಯ, ಶ್ರೀಕಾಂತ್ ಮಾವಿನಕಟ್ಟೆ, ಸತೀಶ್ ಕುಂಭಕ್ಕೋಡು, ಶಿವರಾಮ ಕೇರ್ಪಳ, ದಯಾನಂದ ಬನ, ಶಿವಪ್ರಸಾದ್ ನಡುತೋಟ, ಜಿನ್ನಪ್ಪ ಪೂಜಾರಿ, ಹೇಮಂತ್ ಮಠ, ಬಾಲಗೋಪಾಲ ಸೇರ್ಕಜೆ, ಶ್ಯಾಮ್ ಉಬರಡ್ಕ, ಚಂದ್ರಶೇಖರ ಅಡ್ಪಂಗಾಯ, ಕಿರಣ ಕುರುಂಜಿ, ದಯಾನಂದ ಕೇರ್ಪಳ, ಧರ್ಮಪ್ರಕಾಶ್ ಕುಂತಿನಡ್ಕ, ಲೋಕೇಶ್ ಕೆರೆಮೂಲೆ, ಸುಧಾಕರ ಕುರುಂಜಿಭಾಗ್, ಅನೂಪ್ ಬಿಳಿಮಲೆ, ಹರ್ಷಿತ್ ಕಾರ್ಜ, ಪ್ರಭಾಕರ ನಾಯಕ್ ಮುರೂರು, ಪ್ರಣೀತ್ ಕಣಕ್ಕೂರು, ಸುಪ್ರೀತ್ ಮೋಂಟಡ್ಕ, ಚನಿಯ ಕಲ್ತಡ್ಕ, ಶೀನಪ್ಪ ಬಯಂಬು, ಆಶಾ ತಿಮ್ಮಪ್ಪ ಗೌಡ, ಕೇಶವ ಹೊಸಗದ್ದೆ, ಸುಭೋದ್ ಶೆಟ್ಟಿ ಮೇನಾಲ, ಬುದ್ದ ನಾಯ್ಕ್ ಜಿ, ಪುಲಸ್ತ್ಯ ರೈ, ಚಂದ್ರಾ ಕೋಲ್ಚಾರ್, ದಯಾನಂದ ಕುರುಂಜಿ, ನವ್ಯಾ ಚಂದ್ರಶೇಖರ್, ಜಯರಾಜ ಕುಕ್ಕೆಟ್ಟಿ, ಬೂಡು ರಾಧಾಕೃಷ್ಣ ರೈ, ದೇವರಾಜ ಕುದ್ಪಾಜೆ, ಪ್ರಶಾಂತ್ ಕಾಯರ್ತೋಡಿ, ಜಗನ್ನಾಥ ಜಯನಗರ, ವಿಜಯ ಕುಮಾರ್ ಚಾರ್ಮತ, ಅವಿನಾಶ್ ಕುರುಂಜಿ, ಪ್ರೀತಮ್ ಕೇರ್ಪಳ, ಪಿ.ಕೆ. ಉಮೇಶ್, ಪ್ರಕಾಶ್ ಯಾದವ್, ತೇಜಸ್ವಿನಿ ಕಟ್ಟಪುಣಿ, ನಿಕೇಶ್ ಉಬರಡ್ಕ, ಜಗದೀಶ್ ಸರಳಿಕುಂಜ, ಸುನಿಲ್ ಕೇರ್ಪಳ, ನಾರಾಯಣ ಎಂ.ಎಸ್. ಶಾಂತಿನಗರ, ಶಿವನಾಥ ರಾವ್, ಸುಧಾಕರ ಆಲೆಟ್ಟಿ, ಗುಣವತಿ ಕೊಲ್ಲಂತಡ್ಕ, ವಿಜಯ ಆಲಡ್ಕ, ಗಿರೀಶ್ ಕುಂಠಿನಿ, ನಾರಾಯಣ ಬಂಟ್ರಬೈಲು, ರಾಮಕೃಷ್ಣ ರೈ ಪೇರಾಲುಗುತ್ತು., ಶಂಕರ ಪೆರಾಜೆ, ಶಿವಾನಂದ ಕುಕ್ಕುಂಬಳ, ಸತೀಶ್ ಕೆ.ಜಿ., ರಾಜೇಶ್ ಕಿರಿಭಾಗ, ನಿಖಿಲ್ ಮಡ್ತಿಲ, ಚಿದಾನಂದ ಕುದ್ಪಾಜೆ, ನವೀನ್ ಎಲಿಮಲೆ, ಸತೀಶ್ ಕೆಮನಬಳ್ಳಿ, ಸತ್ಯವತಿ ಬಸವನಪಾದೆ, ಸುಜಾತ ಕುರುಂಜಿ, ಜಯರಾಮ ರೈ ಜಾಲ್ಸೂರುಮ, ಆನಂದ ಬೆಟ್ಟಂಪಾಡಿ, ಚಂದ್ರ ಬೆಟ್ಟಂಪಾಡಿ, ಚಂದ್ರಶೇಖರ ನೆಡಿಲು, ಸತೀಶ್ ಅರಂತೋಡು, ಶಂಕರ ಲಿಂಗಂ ಅಡ್ಯಡ್ಕ, ಆರ್.ಕೆ. ಭಟ್ ಕುರುಂಬುಡೇಲು,
ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ ಕಾರ್ಯಕ್ರಮ ನಿರೂಪಿಸಿದರು. ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ ವಂದಿಸಿದರು.