ಆಲೆಟ್ಟಿ ಪಂಚಾಯತ್ ಮಾಜಿ ಸದಸ್ಯ ಕಲ್ಲೆಂಬಿ ಮಾಧವ ಗೌಡರಿಗೆ ಸಾರ್ವಜನಿಕ ಶ್ರದ್ಧಾಂಜಲಿ

0

ಆಲೆಟ್ಟಿ ಪಂಚಾಯತ್ ಮಾಜಿ ಸದಸ್ಯ ಕಲ್ಲೆಂಬಿ ಮಾಧವ ಗೌಡ ರವರು ಜೂ.3 ರಂದು ನಿಧನರಾಗಿದ್ದು ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮ ಹಾಗೂ ನುಡಿ ನಮನವು ಜೂ.18 ರಂದು ಕಲ್ಲೆಂಬಿ ಐನ್ ಮನೆಯಲ್ಲಿ ನಡೆಯಿತು.

ಮೃತರ ಜೀವನಗಾಥೆಯ ಬಗ್ಗೆ ಪ್ರಾಸ್ತಾವಿಕವಾಗಿ ರತ್ನಾಕರ ಗೌಡ ಕುಡೆಕಲ್ಲು ರವರು ಮಾತನಾಡಿದರು.
ಆಲೆಟ್ಟಿ ಪಂಚಾಯತ್ ಸದಸ್ಯ ಚಂದ್ರಕಾಂತ ನಾರ್ಕೋಡು ಮತ್ತು ಕುಡೆಕಲ್ಲು ಕುಟುಂಬದ ಹಿರಿಯರಾದ ವಾಸುದೇವ ಗೌಡರು ನುಡಿ ನಮನ ಸಲ್ಲಿಸಿದರು.


ಈ ಸಂದರ್ಭದಲ್ಲಿ ಕುಟುಂಬದಯಜಮಾನರು ಹಾಗೂ ಹಿರಿಯರು ಮತ್ತು ಮೃತರ ತಾಯಿ ಶ್ರೀಮತಿ ಜಾನಕಿ ರಾಮಣ್ಣ ಗೌಡ ಕಲ್ಲೆಂಬಿ,
ಪತ್ನಿ ಶ್ರೀಮತಿ ನಾಗವೇಣಿ, ಪುತ್ರರಾದ ಜೀವನ್‌ ಕಲ್ಲೆಂಬಿ, ಪುನೀತ್ ಕಲ್ಲೆಂಬಿ ಮತ್ತು ಪುತ್ರಿ ಶ್ರೀಮತಿ ಪ್ರೀತಿ,ಅಳಿಯ ಹರೀಶ್ ಗೌಡ ಪರ್ಮಲೆ, ಹಾಗೂ ಸಹೋದರರಾದ ಯತೀಶ್ ಕಲ್ಲೆಂಬಿ, ಸತೀಶ್ಚಂದ್ರ ಕಲ್ಲೆಂಬಿ, ಸಹೋದರಿಯರಾದ ಶ್ರೀಮತಿಹೇಮಲತಾ,
ಶ್ರೀಮತಿಪದ್ಮಾವತಿ,
ಶ್ರೀಮತಿಪ್ರೇಮಲತಾ,
ಶ್ರೀಮತಿ ವಾಣಿ ಹಾಗೂ ಮೊಮ್ಮಕ್ಕಳು,ಕುಟುಂಬಸ್ಥರು ಮತ್ತು ಬಂಧು ಮಿತ್ರರು ಉಪಸ್ಥಿತರಿದ್ದರು.

ಆಗಮಿಸಿದ ಎಲ್ಲಾ ಬಂಧು ಮಿತ್ರರು ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಿ ಮೃತರ ಭಾವಚಿತ್ರಕ್ಕೆ
ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಸಮರ್ಪಿಸಿದರು.