ಕಾರಿನಲ್ಲಿ ಹೋಗುತ್ತಿದ್ದ ಜೋಡಿಗೆ ಸುಳ್ಯದಲ್ಲಿ ತಡೆ : ಠಾಣೆಯಲ್ಲಿ ವಿಚಾರಣೆ

0

ಭಜರಂಗದಳ, ಹಿಂದೂ ಜಾಗರಣ ವೇದಿಕೆ ಮಾಹಿತಿ

ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಹುಡುಗ – ಹುಡುಗಿ ಹೋಗುತ್ತಿದ್ದಾರೆಂಬ ಮಾಹಿತಿಯನ್ನು ಭಜರಂಗದಳ ಹಾಗೂ ಹಿಂದೂ ಜಾಗರಣ ವೇದಿಕೆಯವರು ನೀಡಿದ ಮಾಹಿತಿ ಮೇರೆಗೆ ಪೋಲೀಸರು ಕಾರನ್ನು ಸುಳ್ಯದಲ್ಲಿ ತಡೆದ ಘಟನೆ ವರದಿಯಾಗಿದೆ.

ಮುಳ್ಳೇರಿಯಾ ಕಡೆಯಿಂದ ಈ ಕಾರು ಬರುತಿತ್ತೆಂದೂ, ಅದರಲ್ಲಿ ಇಬ್ಬರು ಹುಡುಗರು ಹಾಗೂ ಒಬ್ಬಳು ಹುಡುಗಿ ಇದ್ದಳು. ಕಾರನ್ನು ಸುಳ್ಯದಲ್ಲಿ ನಿಲ್ಲಿಸಿದ ಪೋಲೀಸರು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಿಸುತಿದ್ದಾರೆಂದು ತಿಳಿದುಬಂದಿದೆ. ಭಜರಂಗದಳ ಹಾಗೂ ವಿಶ್ವ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಠಾಣೆ ಎದುರು ಸೇರಿದ್ದಾರೆ.