ತೊಡಿಕಾನ : ಅಡ್ಯಡ್ಕದಲ್ಲಿ ಅಕ್ರಮ ಮದ್ಯ ವಶ

0


ಪ್ರಕರಣ ದಾಖಲು

ಸುಳ್ಯ ತಾಲೂಕಿನ ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ತೊಡಿಕಾನ ಗ್ರಾಮದ ಅಡ್ಯಡ್ಕ ಎಂಬಲ್ಲಿ ಮಾರ್ಚ್ 2 ರಂದು ಅಕ್ರಮ ಮದ್ಯ ಮಾರಾಟ ಅಡ್ಡೆಗೆ ಸುಳ್ಯಪೊಲೀಸರು ದಾಳಿ ನಡೆಸಿ ಅಕ್ರಮ ಮದ್ಯವನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಅಡ್ಯಡ್ಕ ನಿವಾಸಿ ಅಣ್ಣ ದೊರೈ ಎಂದು ಗುರುತಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಸುಳ್ಯ ಪೊಲೀಸ್ ಠಾಣಾ ಉಪ ನಿರೀಕ್ಷಕರು ದಿಲೀಪ್ ಹಾಗೂ ಸಿಬ್ಬಂದಿಗಳು ಸುಳ್ಯ ತಾಲೂಕು ತೊಡಿಕಾನ ಗ್ರಾಮದ ಅಡ್ಯಡ್ಕ ನಿವಾಸಿ ಅಣ್ಣದೊರೈ ಎಂಬವರ ಅಂಗಡಿಯ ಬಳಿ ತಲುಪಿದಾಗ ಅಂಗಡಿಯ ಎದುರು ಇಬ್ಬರು ವ್ಯಕ್ತಿಗಳು ತಮ್ಮ ಕೈಗಳಲ್ಲಿ ಎರಡೆರಡು ಮದ್ಯದ ಪ್ಯಾಕೇಟ್‌ಗಳನ್ನು ಹಿಡಿದುಕೊಂಡಿದ್ದು, ಪೊಲೀಸರು ಜೀಪನ್ನು ಅಂಗಡಿಯ ಬಳಿ ನಿಲ್ಲಿಸಿ ಜೀಪಿನಿಂದ ಇಳಿದು ಅವರನ್ನು ಹಿಡಿಯಲು ಪ್ರಯತ್ನಿಸಿದಾಗ ಗಿರಾಕಿಗಳು ಮದ್ಯದ ಪ್ಯಾಕೇಟ್‌ಗಳೊಂದಿಗೆ ಓಡಿ ಪರಾರಿಯಾದರು ಎನ್ನಲಾಗಿದೆ.
ಈ ಸಂದರ್ಭದಲ್ಲಿ ಪೊಲೀಸರು ಅವರುಗಳ ಬಗ್ಗೆ ಅಂಗಡಿಯಲ್ಲಿದ್ದ ಅಣ್ಣದೊರೈ ಬಳಿ ವಿಚಾರಿಸಿದಾಗ ಪರಿಚಯವಿಲ್ಲವೆಂದು ತಿಳಿಸಿದ್ದು, ಅಂಗಡಿಯ ಆಸುಪಾಸು ತಪಾಸಣೆ ನಡೆಸಿದ್ದಾಗ ಸ್ಥಳದಲ್ಲಿ ಃಟಚಿಛಿಞ ಈoಡಿಣ ಎಂದು ಬರೆದಿರುವ ೫೦೦ ಎಂ ಎಲ್‌ನ ಬಿಯರ್ ಟಿನ್ ಬಾಟ್ಲಿಗಳು-೨೦, (ಒಟ್ಟು ಮೌಲ್ಯ-೨೦೦೦/ರೂಪಾಯಿ) ಖoಥಿಚಿಟ ಅhಚಿಟಟeಟಿgeಡಿs ಎಂದು ಬರೆದಿರುವ ೩೩೦ ಎಂ ಎಲ್‌ನ ಬಿಯರ್ ಬಾಟ್ಲಿಗಳು-೨೧, (ಒಟ್ಟು ಮೌಲ್ಯ-೧೦೫೦/ರೂಪಾಯಿ) ಎರಡು ರಟ್ಟಿನ ಬಾಕ್ಸ್‌ಗಳಲ್ಲಿ ಒಥಿsoಡಿe ಐಚಿಟಿಛಿeಡಿ ಎಂದು ಬರೆದಿರುವ ೯೦ ಎಂ ಎಲ್‌ನ ವಿಸ್ಕಿ ಪ್ಯಾಕೇಟ್‌ಗಳು-೧೪೪ (ಒಟ್ಟು ಮೌಲ್ಯ-೫೦೫೮/ರೂಪಾಯಿ) ಇರುವುದು ಪತ್ತೆಯಾಗಿದೆ.ಒಟ್ಟು ಮೌಲ್ಯ ರೂ ೮೪೯೮ ಮೌಲ್ಯದ ಅಕ್ರಮ ವಶಪಡಿಸಿಕೊಳ್ಳಲಾಗಿದ್ದು ಆರೋಪಿಯನ್ನು ವಶಪಡಿಸಿಕೊಂಡು ಪಡೆದುಕೊಂಡು ಆರೋಪಿಯೊಂದಿಗೆ ಸುಳ್ಯ ಪೊಲೀಸ್ ಠಾಣೆ ಗೆ ಬಂದು ಅ.ಕ್ರ ೧೯/೨೦೨೩ ಕಲಂ ೩೨, ೩೪ ಕರ್ನಾಟಕ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.