ಯುವಕ ಮಂಡಲ ರಿ.ಕಳಂಜ ವತಿಯಿಂದ ಕೋಟೆ ಮುಂಡುಗಾರು ಶಾಲಾ ಕ್ರೀಡಾಂಗಣದಲ್ಲಿ ಮಾ.8 ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಧರ್ಮಸ್ಥಳ ಮೇಳದ “ಮಹಾಕಲಿ ಮಗದೇಂದ್ರ” ಎಂಬ ಯಕ್ಷಗಾನ ಪ್ರಸಂಗ ಪ್ರದರ್ಶನ ಗೊಳ್ಳಲಿದೆ. ಸಂಜೆ ಗಂಟೆ 7 ರಿಂದ ರಾತ್ರಿ 12 ಗಂಟೆ ವರೆಗೆ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.