ಸುಳ್ಯದ ಹಿರಿಯ ಉದ್ಯಮಿ ಉಪೇಂದ್ರ ಕಾಮತ್ ಇನ್ನಿಲ್ಲ

0

ಸುಳ್ಯದ ಹಿರಿಯ ಉದ್ಯಮಿ, ಜಾಲ್ಸೂರು ಅಡ್ಕಾರಿನ ಗೇರು ಬೀಜ ಫ್ಯಾಕ್ಟರಿ ಮಾಲಕ, ಬಿಜೆಪಿಯ ಹಿರಿಯ ಮುಖಂಡ ಹಾಗೂ ಜಾಲ್ಸೂರು ಮಂಡಲ ಪಂಚಾಯತ್‌ನ ಮಾಜಿ ಪ್ರಧಾನರಾಗಿದ್ದ ಉಪೇಂದ್ರ ಕಾಮತ್‌ರವರು ಇದೀಗ ಸ್ವಗೃಹದಲ್ಲಿ ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ. ಅವರಿಗೆ ಸುಮಾರು 9೦ ವರ್ಷ ವಯಸ್ಸಾಗಿತ್ತು.


ಮೃತರು ಪತ್ನಿ ಪದ್ಮಾವತಿ ಕಾಮತ್, ಪುತ್ರ ಸುಧಾಕರ ಕಾಮತ್, ಸೊಸೆ, ಮೊಮ್ಮಕ್ಕಳನ್ನು, ಬಂಧುಗಳನ್ನು ಅಗಲಿದ್ದಾರೆ.