ಸುಳ್ಯ ತಾಲೂಕು ಕಚೇರಿ ಸಭಾಂಗಣದಲ್ಲಿ ಉಚಿತ ಕಾನೂನು ಸಲಹಾ ಕಾರ್ಯಕ್ರಮ

0

ಸುಳ್ಯ ತಾಲೂಕು ಆಡಳಿತ ಕಚೇರಿಯಲ್ಲಿ ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ ವತಿಯಿಂದ ಉಚಿತ ಕಾನೂನು ಸಲಹೆಗಳನ್ನು ಸಾರ್ವಜನಿಕರಿಗೆ ನೀಡುವ ನಿಟ್ಟಿನಲ್ಲಿ ವಾರದ ಎರಡು ದಿನ ಸೋಮವಾರ ಮತ್ತು ಗುರುವಾರದಂದು ಕಾರ್ಯಕ್ರಮ ನಡೆಯುತ್ತಿದೆ.

ಇದರ ಅಂಗವಾಗಿ ಇಂದು ಸುಳ್ಯ ನ್ಯಾಯಾಲಯದ ಪ್ಯಾನಲ್ ವಕೀಲರಾದ ಕುಮಾರಿ ಲೋಲಾಕ್ಷಿ ರವರ ನೇತೃತ್ವದಲ್ಲಿ ಉಚಿತ ಕಾನೂನು ಸೇವೆಗಳ ಮಾಹಿತಿ ಕಾರ್ಯ ನಡೆಯಿತು. ಇಂದಿನ ಮಾಹಿತಿ ಕಾರ್ಯದಲ್ಲಿ ತಾಲೂಕಿನ ವಿವಿಧ ಭಾಗಗಳ ಫಲಾನುಭವಿಗಳು ಭಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಂಡರು.