ಸುಳ್ಯ ಮಾಂಡೋವಿ ಮೋಟಾರ್‍ಸ್ ವತಿಯಿಂದ ಕ್ರಿಕೆಟ್ ಪಂದ್ಯಾಟ ಹಾಗೂ ಸ್ವಚ್ಚತಾ ಕಾರ್ಯಕ್ರಮ

0

ಮಾಂಡೋವಿ ಮೋಟಾರ್‍ಸ್ ಸುಳ್ಯ ಇದರ ವತಿಯಿಂದ ಆಯುಧ ಪೂಜೆಯ ಪ್ರಯುಕ್ತ ಕ್ರಿಕೆಟ್ ಪಂದ್ಯಾಟ ಹಾಗೂ ವಿವಿಧ ಕ್ರೀಡಾಕೂಟ ಅ. ೨ರಂದು ಸುಳ್ಯದ ಜೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಿತು.

ಸುಳ್ಯ ಮಾಂಡೋವಿ ಸಂಸ್ಥೆಯ ಹಿರಿಯರಾದ, ಸೇಲ್ಸ್ ಕೋ ಆರ್ಡಿನೇಟರ್ ವಿವೇಕ್‌ರವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯದ ಸರ್ವಿಸ್ ವಿಭಾಗ ಮುಖ್ಯಸ್ಥ ಸುದೇಶ್ ಜೈನ್ ವಹಿಸಿದ್ದರು. ವೇದಿಕೆಯಲ್ಲಿ ಸೇಲ್ಸ್ ಸೀನಿಯರ್ ಅಡ್ವೈಸರ್ ಅರವಿಂದ, ಸಂದೀಪ್, ನಿರ್ಣಾಯಕರಾದ ಯತೀಂದ್ರ ಅಡ್ಕಾರು, ಬಾಲಕೃಷ್ಣ ಅಡ್ಕಾರು ಉಪಸ್ಥಿತರಿದ್ದರು.
ಅಮಿತ್ ಸ್ವಾಗತಿಸಿ, ವಂದಿಸಿದರು. ದುರ್ಗಾದಾಸ್ ಕಡ್ಲಾರು ಕಾರ್ಯಕ್ರಮ ನಿರೂಪಿಸಿದರು.ಬಳಿಕ ಪುರುಷರಿಗೆ ಕ್ರಿಕೆಟ್ ಪಂದ್ಯಾಟ ಹಾಗೂ ಮಹಿಳಾ ಸಿಬ್ಬಂದಿಗಳಿಗೆ ಕ್ರೀಡಾಕೂಟ ನಡೆಸಲಾಯಿತು.


ಸಮಾರೋಪ ಸಮಾರಂಭ
ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ಮಾಂಡೋವಿ ಸಂಸ್ಥೆಯ ಸರ್ವಿಸ್ ವಿಭಾಗದ ಮುಖ್ಯಸ್ಥರಾದ ಸುದೇಶ್ ಜೈನ್ ವಹಿಸಿದ್ದರು. ವೇದಿಕೆಯಲ್ಲಿ ಸೀನಿಯರ್ ಅಡ್ವೈಸರ್ ಸಂದೀಪ್, ಅರಂವಿಂದ್, ದುರ್ಗಾದಾಸ್, ಸೇಲ್ಸ್ ಏರಿಯಾ ಮೆನೇಜರ್ ಸುರೇಶ್ ಭಟ್, ನಿರ್ಣಾಯಕರಾದ ಯತೀಂದ್ರ ಅಡ್ಕಾರು, ಬಾಲಕೃಷ್ಣ ಅಡ್ಕಾರು ಉಪಸ್ಥಿತರಿದ್ದರು. ಬಳಿಕ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದ ಬಳಿಕ ಶಾಲಾ ವಠಾರದ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.