ಸಂಪಾಜೆ ಸಂಯುಕ್ತ ಪ.ಪೂ. ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

0

ಡಾ. ಕೀಲಾರು ಗೋಪಾಲಕೃಷ್ಣಯ್ಯ ವಿದ್ಯಾ ಪ್ರೋತ್ಸಾಹಕ ಸಾಹಿತ್ಯ ಸ್ಪರ್ಧೆಗಳ ಬಹುಮಾನ ವಿತರಣೆ

ಕೊಡಗು ಸಂಪಾಜೆ ಗ್ರಾಮದ ಸಂಪಾಜೆ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ 68ನೇ ಕನ್ನಡ ರಾಜ್ಯೋತ್ಸವವನ್ನು ನ.1ರಂದು ಆಚರಿಸಲಾಯಿತು.

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಪ್ರಯುಕ್ತ ಡಾ| ಕೀಲಾರು ಗೋಪಾಲಕೃಷ್ಣಯ್ಯ ವಿದ್ಯಾ ಪ್ರೋತ್ಸಾಹಕ ನಿಧಿಯ ವತಿಯಿಂದ ನಡೆಸಲಾದ ವಿವಿಧ ಸಾಹಿತ್ಯ ಸ್ಪರ್ದೆಗಳ ಬಹುಮಾನಗಳ ವಿತರಣಾ ಕಾರ್ಯಕ್ರಮವನ್ನು ಕಾಲೇಜಿನ ದೈಹಿಕ ಶಿಕ್ಷಕ ಕುಶಾಲಪ್ಪರವರು ನಡೆಸಿದರು.

ಕನ್ನಡ ನಾಡು-ನುಡಿಯ ಮಹತ್ವವನ್ನು ಕುರಿತು ಕನ್ನಡ ಉಪನ್ಯಾಸಕ ಚನ್ನಬಸಪ್ಪ ಎಸ್. ರವರು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಲೋಕ್ಯಾನಾಯ್ಕ್ ಬಿ. ಹಾಗೂ ಮುಖ್ಯೋಪಾಧ್ಯಾಯರಾದ ಎ . ಐತ್ತಪ್ಪರವರು ಹಾಗೂ ಎಲ್ಲಾ ಬೋಧಕ-ಬೋಧಕೇತರರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಅಧ್ಯಾಪಕ ಅಪ್ಪಕುಂಞಿರವರು ಸ್ವಾಗತಿಸಿದರು, ಉಪನ್ಯಾಸಕರಾದ ಶ್ರೀಕೃಷ್ಣ ಪ್ರಕಾಶ್ ಅವರು ವಂದಿಸಿದರು. ಉಪನ್ಯಾಸಕ ಚನ್ನಬಸಪ್ಪ ಎಸ್ ಹಾಗೂ ಹಿಂದಿ ಶಿಕ್ಷಕರಾದ ಜಯನಾಯ್ಕ್ ಆರ್. ರವರು ಕಾರ್ಯಕ್ರಮ ನಿರೂಪಿಸಿದರು.