ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾ ಷಷ್ಠಿ ಮಹೋತ್ಸವದ ಪೂರ್ವಭಾವಿ ಸಭೆ

0


ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾ ಷಷ್ಠಿ ಮಹೋತ್ಸವ ಪೂರ್ವಭಾವಿ ಸಭೆ ನ.8 ರಂದು ದೇವಸ್ಥಾನದ ಆಡಳಿತ ಕಛೇರಿಯ ಸಭಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಶಾಸಕಿ ಭಾಗೀರಥಿ ಮುರುಳ್ಯ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾಧಿಕಾರಿ ಮುಲೈ ಮುಗಿಲನ್ , ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತ ಗಿರೀಶ್ ನಂದನ್,ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ, ಕಾರ್ಯನಿರ್ವಹಣಾಧಿಕಾರಿ ಡಾ ಟ ನಿಂಗಯ್ಯ, ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ, ಕಡಬ ತಹಶಿಲ್ದಾರ್ ಪ್ರಭಾಕರ್, ಸುಬ್ರಹ್ಮಣ್ಯ. ಗ್ರಾ.ಪಂ ಅಧ್ಯಕ್ಷೆ ಸುಜಾತಾ ಕಲ್ಲಾಜೆ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪಿ.ಜಿ.ಎಸ್ ಪ್ರಸಾದ್, ಮನೋಹರ ರೈ, ಶ್ರೀವತ್ಸಾ, ಪ್ರಸನ್ನ ದರ್ಬೆ, ಲೊಕೇಶ್ ಮುಂಡಕಜೆ, ವನಜಾ ಭಟ್, ಶೋಭಾ ಗಿರಿಧರ್, ಮಾಜಿ ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಮನೋಜ್, ಚಂದ್ರಶೇಖರ್, ಕಿಶೋರ್ ಕುಮಾರ್ ಕೂಜುಗೋಡು, ಕಡಬ ಡಾಟ ನಂದಕುಮಾರ್, ಮತ್ತಿತರರು ಉಪಸ್ಥಿತರಿದ್ದರು. ಸಭೆಯಲ್ಲಿ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರುಗಳು, ಮಾಜಿ ಮಾಸ್ಟರ್ ಪ್ಲಾನ್ ಸದಸ್ಯರುಗಳು, ಗ್ರಾ.ಪಂ ಸದಸ್ಯರು, ಇಲಾಖಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ಬ್ರಹ್ಮರಥ ರಥೋತ್ಸವ ಸಂದರ್ಭ ಹೆಚ್ಚಿನ ಜನಕ್ಕೆ ಅವಕಾಶ ಒದಗಿಸುವ ಕುರಿತು, ಊಟೋಪಚಾರಕ್ಕೆ ಸ್ವಯಂ ಸೇವಕರಿಗೆ ಪತ್ಯೇಕ ಉಟೋಪಚಾರ, ಆರೋಗ್ಯ ಸೇವೆ, ಬೀದಿ ವ್ಯಾಪರಸ್ಥರ ಬಗ್ಗೆ ಚರ್ಚೆ, ಗ್ರೀನ್ ಪಟಾಕಿ, ಪಾರ್ಕಿಂಗ್, ಕುಮಾರಧಾರ ಹೂಳೆತ್ತುವ ಬಗ್ಗೆ, ಊಟೋಪಚಾರ, ಭದ್ರತೆ ಇತ್ಯಾದಿ ವಿಷಯಗಳ ಬಗ್ಗೆ ನಡೆಯಿತು.