ಪಂಜ ವಾಣಿ ಶ್ರೀ ಕಾಂಪ್ಲೆಕ್ಸ್ ಮಾಲಕ ಪಿ.ಆರ್.ನಾರಾಯಣ ಸಾಲ್ಯಾನ್ ಹೃದಯಾಘಾತದಿಂದ ನಿಧನ

0

ಪಂಜ ವಾಣಿ ಶ್ರೀ ಕಾಂಪ್ಲೆಕ್ಸ್ ಮತ್ತು ವಾಣಿಶ್ರೀ ಫ್ಯಾನ್ಸಿ -ಫೂಟ್ ವೇರ್ ಮಾಲಕ ಪಿ.ಆರ್ ನಾರಾಯಣ ಸಾಲ್ಯಾನ್ ರವರು ದ.5.ರಂದು ರಾತ್ರಿ ಹೃದಯಾಘಾತದಿಂದ ನಿಧನರಾದರು.

ಅವರಿಗೆ 64 ವರುಷ ವಯಸ್ಸಾಗಿತ್ತು.
ದ.5 ರಂದು ರಾತ್ರಿ ಒಮ್ಮಿಂದೊಮ್ಮೆಲೆ ಅನಾರೋಗ್ಯಕ್ಕೆ ಒಳಗಾಗಿದ್ದು ಅವರನ್ನು ಕಡಬದ ಆಸ್ಪತ್ರೆಗೆ ಆಂಬ್ಯುಲೆನ್ಸ್ ನಲ್ಲಿ ಕೊಂಡೊಯ್ಯಲಾಯಿತು.ಆದರೆ ಆಸ್ಪತ್ರೆಗೆ ತಲುಪಿ ಸ್ವಲ್ಪ ಹೊತ್ತಿನಲ್ಲಿ ಕೊನೆಯುಸಿರೆಳೆದರು.ಅವರು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ಜಾತ್ರೋತ್ಸವ ಮತ್ತು
ಪಂಜ ಆದಿ ಬೈದೆರುಗಳ ನೇಮೋತ್ಸದಲ್ಲಿ ಪೂರ್ವ ಸಂಪ್ರದಾಯದಂತೆ
ಕೈ ಬೆಳಕು ಸೇವೆ ನೀಡುತ್ತಿದ್ದರು.

ಪಂಜ ಶ್ರೀ ಶಾರದಾಂಬಾ ಭಜನಾ ಮಂದಿರದ ಆಡಳಿತ ಮಂಡಳಿ ಸದಸ್ಯರಾಗಿದ್ದರು.
ಮೃತರು ಪತ್ನಿ ಪಂಜ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ವೀಣಾ, ಪುತ್ರರಾದ ವರುಣ್,ವರ್ಷಿತ್, ಪುತ್ರಿ ಶ್ರೀಮತಿ ವಾಣಿಶ್ರೀ ನಿತಿನ್ ವಳಲಂಕೆ ಮೂಲ್ಕಿ, ಅಳಿಯ, ಮೊಮ್ಮಕ್ಕಳು, ಸಹೋದರ, ಸಹೋದರಿಯರು, ಬಂಧು ಮಿತ್ರರು, ಕುಟುಂಬಸ್ಥರನ್ನು ಅಗಲಿದ್ದಾರೆ. (ಇಂದು) ದ.6 ರಂದು ನಾರಾಯಣ ರ ಪುತ್ರ ವರುಣ್ ರವರ ಮದುವೆಗೆ ಮದರಂಗಿ ಶಾಸ್ತ್ರ ನಡೆಯ ಬೇಕಿತ್ತು.