ಸ್ನೇಹ ಶಿಕ್ಷಣ ಸಂಸ್ಥೆಗೆ “Education Today” ಪ್ರಶಸ್ತಿ

0

ದೇಶದ ಪ್ರತಿಷ್ಟಿತ Education Today ಸಂಸ್ಥೆಯವರು ದೇಶಾದ್ಯಂತ ಶಿಕ್ಷಣದ ಗುಣಮಟ್ಟ ಮತ್ತು ಪ್ರಯೋಗಶಿಲತೆಗೆ ಸಂಬಂಧಿಸಿದಂತೆ 60ಕ್ಕಿಂತಲೂ ಹೆಚ್ಚು ಆಯಾಮಗಳಲ್ಲಿ ಸಮೀಕ್ಷೆಯನ್ನು ನಡೆಸಿ ವಿವಿಧ ಕೆಟೆಗರಿಗಳಲ್ಲಿ ಪ್ರತಿವರ್ಷವೂ ಪ್ರಶಸ್ತಿಗಳನ್ನು ನೀಡುತ್ತಾರೆ. ಈ ವರ್ಷ ರಾಜ್ಯ ಪಠ್ಯಕ್ರಮದ ಶಾಲೆಗಳ ಕೆಟಗರಿಯಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ಸಂಬಂಧಿಸಿ ಕೊಡಮಾಡುವ Ranked No. 1 in Cocurricular Education ಎಂಬ ರಾಷ್ಟ್ರೀಯ ಪ್ರಶಸ್ತಿಗೆ ಸುಳ್ಯದ ಸ್ನೇಹ ಶಾಲೆಯು ಆಯ್ಕೆಯಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಇದೇ ದಶಂಬರ್ 11 ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂಬುದಾಗಿ ತಮಗೆ ಪತ್ರ ಬಂದಿರುವುದಾಗಿ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆ ಯವರು ತಿಳಿಸಿರುತ್ತಾರೆ.