ದುಗ್ಗಲಡ್ಕ; ನೀರಬಿದಿರೆಯಲ್ಲಿ ಭೂಮಿ ಗುಳಿಗ ದೈವದ ಕೋಲ

0

ರಾಮಚಂದ್ರ ಗೌಡ ನೀರಬಿದಿರೆ ಸ್ಮರಣಾರ್ಥ ನೂತನ ಕಟ್ಟಡ ಉದ್ಘಾಟನೆ

ದುಗ್ಗಲಡ್ಕ ಸಮೀಪದ ನೀರಬಿದಿರೆ ಎಂಬಲ್ಲಿ ಭೂಮಿ ಗುಳಿಗ ದೈವದ ಕೋಲ ಫೆ. 15 ರಂದು ನಡೆಯಿತು. ಪ್ರತಿಷ್ಠೆಯ ಬಳಿಕ ಮೂರನೇ ಕೋಲ ನಡೆಯಿತು. ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನೆರವೇರಿತು. ನೀರಬಿದಿರೆ ಕುಟುಂಬಸ್ಥರು, ಹಾಗೂ ಊರ ಭಕ್ತಾಧಿಗಳು ಉಪಸ್ಥಿತರಿದ್ದರು.


ನೂತನ ಕಟ್ಟಡ ಉದ್ಘಾಟನೆ
ದೈವದ ಅಡುಗೆ ಮತ್ತು ಸಾಮಾಗ್ರಿಗಳನ್ನು ಇಡಲು ನೂತನ ಕಟ್ಟಡವನ್ನು ಸುಮಾರು 2.25ಲಕ್ಷ ವೆಚ್ಚದಲ್ಲಿ ದಿ.ರಾಮಚಂದ್ರ ಗೌಡ ನೀರಬಿದಿರೆ ಮಂಗಳೂರು ಸ್ಮರಣಾರ್ಥ ಅವರ ಪತ್ನಿ ಮತ್ತು ಮಕ್ಕಳು ಕೊಡುಗೆಯಾಗಿ ನಿರ್ಮಿಸಿದ್ದು,,ಈ ಕಟ್ಟಡವನ್ನು ಉಪಯೋಗಕ್ಕೆ ಅರ್ಪಿಸಲಾಯಿತು. ದಿ‌.ರಾಮಚಂದ್ರ ಗೌಡರ ಪತ್ನಿ ಶ್ರೀಮತಿ ಮೀನಾಕ್ಷಿ, ಮಕ್ಕಳಾದ ಸಂದೀಪ್ ರಾಜ್ ಮತ್ತು ಶರತ್ ಹಾಗೂ ಮನೆಯವರು , ಕುಟುಂಬದವರು ಉಪಸ್ಥಿತರಿದ್ದರು.


ಕಟ್ಟಡವನ್ನು ಉದಾರವಾಗಿ ನೀಡಿದ ರಾಮಚಂದ್ರ ಗೌಡರ ಪತ್ನಿ ಶ್ರೀಮತಿ ಮೀನಾಕ್ಷಿಯವರನ್ನು ಊರವರ ಪರವಾಗಿ ಮತ್ತು ಕಟ್ಟಡದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಶ್ರೀನಿಧಿ ಕನ್ ಸ್ಟ್ರಕ್ಷನ್ ನ ಮಾಲಕರಾದ ದಿನೇಶ್ ಕೊಯಿಕುಳಿಯವರನ್ನು ನೀರಬಿದಿರೆ ಕುಟುಂಬದ ಪರವಾಗಿ ಸನ್ಮಾನಿಸಲಾಯಿತು.
ಕೋಲದಲ್ಲಿ ನೂರಾರು ಮಂದಿ ಭಕ್ತಾಧಿಗಳು ಭಾಗವಹಿಸಿದ್ದರು.