ಸುಳ್ಯದ ಗೌಡರ ಯುವ ಸೇವಾ ಸಂಘದ ಮಹಾಸಭೆ : ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ

0

ಗೌಡರ ಯುವ ಸೇವಾ ಸಂಘ ಸುಳ್ಯ, ಗೌಡ ಸೋಶಿಯೋ ಎಜ್ಯುಕೇಶನ್ ಫೌಂಡೇಶನ್ ಸುಳ್ಯ ಇದರ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ ಕೊಡಿಯಾಲಬೈಲು ಗೌಡ ಸಮುದಾಯ ಭವನದಲ್ಲಿ ನಡೆಯಿತು.

ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಚಾರ್ ಅಧ್ಯಕ್ಷತೆ ವಹಿಸಿದ್ದರು.


ಸಂಘದ ಸ್ಥಾಪಕಾಧ್ಯಕ್ಷ ನಿತ್ಯಾನಂದ ಮುಂಡೋಡಿ, ಸುಳ್ಯ ವೆಂಕಟರಮಣ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿ ಅಧ್ಯಕ್ಷ ಪಿ.ಸಿ.ಜಯರಾಂ, ಗೌಡ ಸಮುದಾಯ ಭವನ ಸಮಿತಿಯ ಅಧ್ಯಕ್ಷ ಎ.ವಿ. ತೀರ್ಥರಾಮ, ಗೌಡರ ಯುವ ಸೇವಾ ಸಂಘದ ಉಪಾಧ್ಯಕ್ಷರುಗಳಾದ ದಾಮೋದರ ನಾಕೋಡು, ಮುಗುಪ್ಪು ಕೂಸಪ್ಪ ಗೌಡ, ವಂಸತ ಕಿರಿಭಾಗ, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಮಾಣಿಬೆಟ್ಟು, ಯುವ ಘಟಕದ ಅಧ್ಯಕ್ಷ ರಜತ್ ಅಡ್ಕಾರು, ಎಂ.ಜಿ.ಎಂ. ಶಾಲಾ ಸಂಚಾಲಕ ದೊಡ್ಡಣ್ಣ ಬರೆಮೇಲು ವೇದಿಕೆಯಲ್ಲಿ ಇದ್ದರು.

ಸನ್ಮಾನ : ಅರೆಭಾಷೆ ಅಕಾಡೆಮಿಗೆ ಅಧ್ಯಕ್ಷರಾಗಿ ಸರಕಾರದಿಂದ ನೇಮಕಗೊಂಡ ಸದಾನಂದ ಮಾವಜಿ, ನಿರ್ದೇಶಕರುಗಳಾದ ಡಾ.ಎನ್.ಎ. ಜ್ಞಾನೇಶ್, ಚಂದ್ರಶೇಖರ ಪೇರಾಲು, ಪಿ.ಎಸ್. ಕಾರ್ಯಪ್ಪ, ತೇಜಕುಮಾರ್ ಬಡ್ಡಡ್ಕ, ಲತಾ ಕುದ್ಪಾಜೆ, ಚಂದ್ರಾವತಿ ಬಡ್ಡಡ್ಕ ರನ್ನು ಸನ್ಮಾನಿಸಲಾಯಿತು.

ಶೈಕ್ಷಣಿಕ ಸಾಧಕರಾದ ಶ್ರಾವ್ಯ ಮುತ್ಲಾಜೆ, ಡಾ.ಸುಧೀಕ್ಷ, ಪ್ರಥಮ್ ಶೇಖರ್, ಲಿಖಿತ ಎ.ಪಿ. ಹಾಗೂ ಸ್ವ ಉದ್ಯೋಗದಲ್ಲಿ ಸಾಧಕರಾಗಿರುವ ರಾಧಾಕೃಷ್ಣ ಹೆಚ್. ರನ್ನು ಸನ್ಮಾನಿಸಲಾಯಿತು.

ಗೌಡ ಸಮುದಾಯ ಭವನಕ್ಕೆ ದೇಣಿಗೆ‌ ನೀಡಿದ ಮುರುಳ್ಯದ ಸೀತಾರಾಮ ಗೌಡ – ಶೀಲಾ ದಂಪತಿಗಳನ್ನು, ಹಾಗೂ ಕುರುಂಜಿ ಲಿಂಗಪ್ಪ ಗೌಡರನ್ನು ಗೌರವಿಸಲಾಯಿತು.

ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಯಲ್ಲಿ ಶೇ.95 ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ದಿನೇಶ್ ಮಡಪ್ಪಾಡಿ, ಡಾ. ಎನ್.ಎ.‌ ಜ್ಞಾನೇಶ್, ದಿನೇಶ್ ಮಡ್ತಿಲ, ಪಿ.ಕೆ. ತಿಮ್ಮಯ್ಯ, ವೀರಪ್ಪ ಗೌಡ ಕಣ್ಕಲ್ ಸನ್ಮಾನಿತರನ್ನು ಪರಿಚಯಿಸಿದರೆ, ಹಿರಿಯರಾದ ಪ್ರೊ ಬಾಲಚಂದ್ರ ಗೌಡ ಹಾಗೂ ಎನ್.ಎ. ರಾಮಚಂದ್ರರು ಸನ್ಮಾನ ನೆರವೇರಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಬೆಳ್ಯಪ್ಪ ಗೌಡ ಬಳ್ಳಡ್ಕ ವರದಿ ವಾಚಿಸಿದರೆ, ಕೋಶಾಧಿಕಾರಿ ಚಂದ್ರಶೇಖರ ಮೇರ್ಕಜೆ ಲೆಕ್ಕಪತ್ರ ಸಭೆಯ ಮುಂದಿಟ್ಟರು.

ಸಂಘದ ಉಪಾಧ್ಯಕ್ಷ ಸದಾನಂದ ಮಾವಜಿ ಸ್ವಾಗತಿಸಿದರು. ವೆಂಕಟರಮಣ ‌ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ. ವಿಶ್ವನಾಥ್ ಕಾರ್ಯಕ್ರಮ ‌ನಿರೂಪಿಸಿದರು. ಉಪಾಧ್ಯಕ್ಷ ರಾದ ದಾಮೋದರ ನಾರ್ಕೋಡು‌ ವಂದಿಸಿದರು.