ಕನಕಮಜಲು ಮೊಗೇರ ಗ್ರಾಮ ಸಮಿತಿ ವತಿಯಿಂದ ಅಂಬೇಡ್ಕರ್ ಜಯಂತಿ ಆಚರಣೆ

0

ಕನಕಮಜಲು ಗ್ರಾಮದ ಮೊಗೇರ ಗ್ರಾಮಸಮಿತಿಯ ವತಿಯಿಂದ ಸಂವಿಧಾನಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನಾಚರಣೆಯನ್ನು ಎ.14ರಂದು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಮೊಗೇರ ಸಂಘದ ಗೌರವ ಸಲಹೆಗಾರ ಬಾಬು ಕನಕಮಜಲು, ಮೊಗೇರ ಗ್ರಾಮಸಮಿತಿ ಅಧ್ಯಕ್ಷ ಚಂದ್ರಶೇಖರ ಮಠ, ಕಾರ್ಯದರ್ಶಿ ಚಂದ್ರಶೇಖರ ಕನಕಮಜಲು ಸೇರಿದಂತೆ ಮೊಗೇರ ಗ್ರಾಮ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.