ಮೇಘ ಶಿವರಾಮ ಯೇನಡ್ಕ ವಿದೇಶ ಪ್ರಯಾಣ

0


ಜರ್ಮನಿ ದೇಶದ ಪ್ರತಿಷ್ಠಿತ ವಿಶ್ವವಿದ್ಯಾನಿಲಯದಲ್ಲಿ ಪ್ರವೇಶ ಗಳಿಸಿರುವ ಮೇಘ ಶಿವರಾಮ ಯೇನಡ್ಕ ಮೇ.6ರಂದು ವಿದೇಶ ಪ್ರಯಾಣ ಕೈಗೊಳ್ಳಲಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿ ಕು.ಮೇಘ ೯ನೇ ತರಗತಿಯಲ್ಲಿ ಅಮೇರಿಕದ ನಾಸಾಗೆ ಭೇಟಿ ನೀಡಿ ರೋಬೋಟಿಕ್ ತಂತ್ರಜ್ಞಾನದಲ್ಲಿ ತರಬೇತಿ ಪಡೆದು ಪ್ರಶಸ್ತಿಗಳಿಸಿದ್ದರು. ಕು.ಮೇಘರವರು ಶಿವರಾಮ ಯೇನಡ್ಕ ಮತ್ತು ಶ್ರೀಮತಿ ಗೀತಾಂಜಲಿ ದಂಪತಿಯ ಪುತ್ರಿ.

ಶಿವರಾಮ ಯೇನಡ್ಕ ರವರು ಬೆಂಗಳೂರಿನ ಪ್ರತಿಷ್ಠಿತ MNC ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಎಡಮಂಗಲ ದಿ.ಯೇನಡ್ಕ ಚೆನ್ನಪ್ಪ ಗೌಡ ಮತ್ತು ದಿ.ಶ್ರೀಮತಿ ಗಿರಿಜಾ ಯೇನಡ್ಕ ರವರ ಕಿರಿಯ ಪುತ್ರ.