ಸಂಪಾಜೆ ಇಬ್ರಾಹಿಂ ಮಾಸ್ಟರ್ ಮೊಮ್ಮಗಳು ತಸ್ನೀಂಗೆ ಎಸ್.ಎಸ್.ಎಲ್.ಸಿ ಯಲ್ಲಿ 618 ಅಂಕಗಳು

0

ಸಂಪಾಜೆ ಇಬ್ರಾಹಿಂ ಮಾಸ್ಟರ್ ಮೊಮ್ಮಗಳು ಬಿ.ಸಿ.ರೋಡ್ ಕೈಕಂಬ ನಿವಾಸಿ ಝೈಬುನ್ನೀಸಾ ಮತ್ತು ಇಂಜಿನಿಯರ್ ಮೊಹಮ್ಮದ್ ಕೆ.ಪಿ ಅವರ ಪುತ್ರಿ ಬಿ.ಸಿ.ರೋಡ್ ಸಮೀಪದ ಮೊಡಂಕಾಪು ಇನ್ಫಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ತಸ್ನೀಂಗೆ 2023-24ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 618 ಅಂಕವನ್ನು ಗಳಿಸಿ 98.88% ಫಲಿತಾಂಶವನ್ನು ದಾಖಲಿಸಿದ್ದಾಳೆ.

ಆಂಗ್ಲ ಭಾಷಾ ಪತ್ರಿಕೆಯಲ್ಲಿ 100, ಕನ್ನಡದಲ್ಲಿ 124, ಹಿಂದಿ ಮತ್ತು ಸಮಾಜ ವಿಜ್ಞಾನದಲ್ಲಿ 99, ಗಣಿತ ಹಾಗೂ ವಿಜ್ಞಾನ ವಿಷಯದಲ್ಲಿ 98 ಅಂಕ ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.