CBSE ಫಲಿತಾಂಶ ಪ್ರಕಟ: ಸವ್ಯಸಾಚಿ ಕೊಯ್ನಾಡು ಗೆ 96.4%

0

ಪಿ ಎಂ ಶ್ರೀ ಜವಾಹರ್ ನವೋದಯ ವಿದ್ಯಾಲಯ ದಕ್ಷಿಣ ಕನ್ನಡ, ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್(CBSE)ಇದರ 10ನೇ ತರಗತಿಯ ವಾರ್ಷಿಕ ಪರೀಕ್ಷೆ 2023/24ರ ಸಾಲಿನ ಫಲಿತಾಂಶದಲ್ಲಿ ಸವ್ಯಸಾಚಿ ಕೊಯ್ನಾಡು 500ರಲ್ಲಿ 482 ಅಂಕ(96.4%) ಗಳಿಸಿ, ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ವಿದ್ಯಾ ಸಂಸ್ಥೆಗೆ ಮೂರನೇ ರ್‍ಯಾಂಕ್ ಪಡೆದಿರುತ್ತಾನೆ.

ಸುಳ್ಯ ರೋಟರಿ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯ ಹಳೆ ವಿದ್ಯಾರ್ಥಿಯಾಗಿರುತ್ತಾನೆ.

ಇವನು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಸಂಪಾಜೆ ಗ್ರಾಮದ ಕೊಯ್ನಾಡು ಕುಂದಲ್ಪಾಡಿ ಮನೆತನದ, ರೋಟರಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಕಲಾಶಿಕ್ಷಕ(ಆರ್ಟ್ & ಕ್ರಾಫ್ಟ್ )ಪದ್ಮನಾಭ ಕೊಯ್ನಾಡು, ಅದೇ ಸಂಸ್ಥೆಯ ಪ್ರೌಢ ಶಾಲಾ ವಿಭಾಗದ ಕಂಪ್ಯೂಟರ್ ಶಿಕ್ಷಕಿ ಚಂದ್ರಕಲಾ ಕುಂಚಡ್ಕರವರ ಪುತ್ರ.