ಎಲಿಮಲೆಯಲ್ಲಿ ದನ ಅಕ್ರಮ ಸಾಗಾಟದ ವಾಹನಕ್ಕೆ ತಡೆ

0

ರಾತ್ರಿ ವೇಳೆ ಪಿಕಪ್ ನಲ್ಲಿ ದನಗಳನ್ನು ಅಕ್ರಮವಾಗಿ ಸಾಗಾಟ ನಡೆಸುತ್ತಿದ್ದವರನ್ನು ಸ್ಥಳೀಯರು ಹಿಡಿದ ಘಟನೆ ವರದಿಯಾಗಿದೆ‌. ಎಲಿಮಲೆಯ ಅಂಬೆಕಲ್ಲು ಕಡೆಯಿಂದ 4 ದನಗಳನ್ನು ರಾತ್ರಿ 3 ಗಂಟೆಯ ವೇಳೆಗೆ (ಕೆಎ 21 ಎ 0824) ಪಿಕ ಅಪ್ ವಾಹನದಲ್ಲಿ ತುಂಬಿಸಿ ಸಾಗಾಟ ಮಾಡುತ್ತಿದ್ದ ವೇಳೆ ಮಾಹಿತಿ ತಿಳಿದ ಸ್ಥಳೀಯ ಯುವಕರು ಎಲಿಮಲೆ ಅಂಬೆಕಲ್ಲು ರಸ್ತೆಯ ಕಲ್ಲುಪಣೆ ಎಂಬಲ್ಲಿ ವಾಹನವನ್ನು ಅಡ್ಡ ಗಟ್ಟಿದರು. ಈ ವೇಳೆ ಇಬ್ಬರು ಓಡಿದರೆಂದು ಇಬ್ಬರನ್ನು ಸ್ಥಳೀಯರು ಹಿಡಿದರೆಂದು ತಿಳಿದು ಬಂದಿದೆ.

ಪುತ್ತೂರಿನ ಹರೀಶ್ ಮತ್ತು ಕೋಣಾಜೆಯ ಇಬ್ರಾಹಿಂ ಎಂಬವರನ್ನು ಸ್ಥಳೀಯರು ಹಿಡಿದಿದ್ದಾರೆ.

ಎಲಿಮಲೆ ಭಾಗದಿಂದ ಈ ಹಿಂದೆಯೂ ದನಗಳ ಅಕ್ರಮ ದನ ಸಾಗಾಟ ನಡೆಯುತ್ತಿತ್ತೆನ್ನಲಾಗಿದೆ.