ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಶ್ರೀ ನರಸಿಂಹ ಜಯಂತೀ ಮಹೋತ್ಸವ

0

ಅಗೋಳಿಕಜೆ ಚೆನ್ನಪ್ಪ ಗೌಡ ಹಾಗೂ ಅಗೋಳಿಕಜೆ ಶ್ರೀಮತಿ ನಾಗಮ್ಮರವರಿಗೆ ನರಸಿಂಹಾನುಗ್ರಹ ಪ್ರಶಸ್ತಿ ಪ್ರಧಾನ

ಇಂದು ಶ್ರೀ ನರಸಿಂಹ ದೇವರ ಮಹಾರಥೋತ್ಸವ

ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಶ್ರೀ ನರಸಿಂಹ ಜಯಂತೀ ಮಹೋತ್ಸವ ಮೇ.೨೦ ರಿಂದ ಆರಂಭಗೊಂಡಿದ್ದು,
ಶ್ರೀಮದಾನಂದತೀರ್ಥ ತತ್ತ್ವದರ್ಶಿನೀ ಸಭಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಮೇ.೨೨ರಂದು ಶ್ರೀ ನರಸಿಂಹ ಜಯಂತಿಯಂದು ಪ್ರಾತಃಕಾಲ ಶ್ರೀ ನರಸಿಂಹ ದೇವರ ಮಹಾಭಿಷೇಕ, ರಾತ್ರಿ ಹೊರಾಂಗಣ ಮತ್ತು ರಾಜ ಬೀದಿಯಲ್ಲಿ ವಿಮಾನೋತ್ಸವ, ವಸಂತಪೂಜೆ, ಡೋಲೋತ್ಸವ ನಡೆಯಿತು.

ಬೆಳಗ್ಗೆ ಯಜೇಶ್ ಆಚಾರ್ಯ ಮತ್ತು ಬಳಗದಿಂದ ಭಕ್ತಿ ಸಂಗೀತ ನಡೆಯಿತು. ಸಂಜೆ ಆನಂದತೀರ್ಥ ತತ್ವದರ್ಶಿನೀ ಸಭಾ ಕಾರ್ಯಕ್ರಮದಲ್ಕಿ ಅನುಗ್ರಹ ಸಂದೇಶ ಕಾರ್ಯಕ್ರಮ ನಡೆಯಿತು.

ಅದಮಾರು ಮಠ ಉಡುಪಿ ಮಠದ ಈಶಪ್ರಿಯತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿ, “ಕಷ್ಟಗಳು ಎದುರಿಸುವಾಗ ನಮಗೆ ಪಕ್ವತೆ ಬರಬೇಕು ಎಂದು ಭಗವಂತ ಕೊಟ್ಟಿದ್ದಾನೆ ಎಂಬ ಅನುಸಂಧಾನ ಮಾಡಿದಾಗ ಜೀವನದಲ್ಲಿ ಶ್ರೇಯಸ್ಸು ಆಗುತ್ತದೆ. ನಮ್ಮನ್ನು ರಕ್ಷಣೆ ಮಾಡುವ ಹೊಣೆ ಭಗವಂತ ಎಂಬ ನಂಬಿಕೆ ನಮ್ಮಲ್ಲಿದ್ದರೆ ನಮ್ಮ ಜೀವನದಲ್ಲಿ ಯಶಸ್ಸು ಲಭ್ಯ ” ಎಂದು ಆಶೀರ್ವಚನ ನೀಡಿದರು.

ಚಿತ್ರಾಪುರ ಮಠದ ವಿಶ್ವೇಂದ್ರತೀರ್ಥ ಶ್ರೀಪಾದರು ಮಾತನಾಡಿ, “ಭಗವಂತನ ಮೇಲೆ ವಿಶ್ವಾಸ ಇಟ್ಟಲ್ಲಿ ನಮ್ಮನ್ನು ರಕ್ಷಣೆ ಮಾಡುತ್ತಾನೆ. ನರಸಿಂಹ ದೇವರ ಆರಾಧನೆಯಿಂದ ಜ್ಞಾನ ವೃದ್ಧಿಯಾಗುತ್ತದೆ” ಎಂದು ಅನುಗ್ರಹ ಸಂದೇಶ ನೀಡಿದರು.

ಪೂರ್ಣಚಂದ್ರ ವಿದ್ಯಾಪೀಠ ಬೆಂಗಳೂರು ಇದರ ನಿವೃತ್ತ ಪ್ರಾಂಶುಪಾಲರಾದ ಎ.ಹರಿದಾಸ್ ಭಟ್ ಉಪನ್ಯಾಸ ನೀಡಿದರು.

ಶ್ರೀ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.

ಇದೇ ಸಂದರ್ಭ ಶ್ರೀ ಮಠದಲ್ಲಿ ಹಲವಾರು ವರ್ಷಗಳಿಂದ ಸಿಬ್ಬಂದಿಗಳಾಗಿ ದುಡಿಯುತ್ತಿರುವ ಅಗೋಳಿಕಜೆ ಚೆನ್ನಪ್ಪ ಗೌಡ ಹಾಗೂ ಅಗೋಳಿಕಜೆ ಶ್ರೀಮತಿ ನಾಗಮ್ಮ ರವರಿಗೆ ನರಸಿಂಹಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಲಕ್ಷ್ಮಣ ಆಚಾರ್ಯ ಶ್ಲೋಕೋಚ್ಛಾರಣೆ ಮಾಡಿದರು.
ಕಿರಣ ಆಚಾರ್ಯ ಸ್ವಾಗತಿದರು.

ಬಳಿಕ ವಿದ್ವಾನ್ ಬಪ್ಪನಾಡು ನಾಗೇಶ ಮತ್ತು ಬಳಗದವರಿಂದ ನಾದಸ್ವರ ಕಛೇರಿ ನಡೆಯಿತು.


ಪೇಜಾವರ ವಿಶ್ವಪ್ರಸನ್ನ ಶ್ರೀಗಳಿಗೆ ಪಾದಪೂಜೆ


ಆನಂದತೀರ್ಥ ತತ್ವದರ್ಶಿಣಿ ಸಭಾಕಾರ್ಯಕ್ರಮದಲ್ಲಿ ಅನುಗ್ರಹ ಸಂದೇಶ ನೀಡಬೇಕಿದ್ದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಸಭಾ ಕಾರ್ಯಕ್ರಮಕ್ಕೂ ಮೊದಲು ಆಗಮಿಸಿ ಶ್ರೀ ನರಸಿಂಹ ದೇವರಿಗೆ ಮಹಾಭಿಷೇಕ ನೆರವೇರಿಸಿದರು. ಬಳಿಕ ಶ್ರೀಗಳಿಗೆ ಮಠದ ದಿವಾನ ಸುದರ್ಶನ ಜೋಯಿಸ ದಂಪತಿಗಳು ಪಾದಪೂಜೆ ನೆರವೇರಿಸಿದರು.


ಇಂದು ಮಹಾರಥೋತ್ಸವ


ಮೇ. ೨೩ರಂದು ಬೆಳಿಗ್ಗೆ ವ್ಯಾಸಪೂರ್ಣೀಮ, ವ್ಯಾಸ ಪೂಜೆ ನಡೆದ ಬಳಿಕ ನರಸಿಂಹ ದೇವರ ಮಹಾರಥೋತ್ಸವ ನಡೆಯಲಿದೆ. ಬಳಿಕ ವಸಂತ ಪೂಜೆ, ರಾತ್ರಿ ಡೋಲೋತ್ಸವ ನಡೆಯಲಿದೆ. ಮೇ. ೨೪ರಂದು ಕುಮಾರಧಾರದಲ್ಲಿ ಶ್ರೀ ದೇವರ ಅವಭೃತೋತ್ಸವ ಹಾಗೂ ವಸಂತ ಪೂಜೆ ನಡೆದ ಬಳಿಕ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.