ಬೀದರ ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯ ವಿಸ್ತರಣಾ ಪರಿಷತ್ ಗೆ ನವೀನ್ ಚಾತುಬಾಯಿ ನೇಮಕ

0

ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ ಇದರ ವಿಸ್ತರಣಾ ಶಿಕ್ಷಣ ಪರಿಷತ್ ಸದಸ್ಯರಾಗಿ ಸುಳ್ಯ ತಾಲೂಕು ಐವರ್ನಾಡು ಗ್ರಾಮದ ಪ್ರಗತಿಪರ ಕೃಷಿಕರಾದ ನವೀನ್ ಚಾತುಬಾಯಿ ಅವರನ್ನು ನೇಮಕ ಮಾಡಲಾಗಿದೆ.ಈ ಸಮಿತಿಯಲ್ಲಿ ವಿಶ್ವವಿದ್ಯಾಲಯದ ಕುಲಪತಿಗಳು ವಿಶ್ವವಿದ್ಯಾಲಯಕ್ಕೆ ಒಳಪಟ್ಟ ಎಲ್ಲಾ ಕಾಲೇಜುಗಳ,ಸಂಶೋಧನ ಕೇಂದ್ರಗಳ ಮುಖ್ಯಸ್ಥರು ಇರುವರು.ವಿಶ್ವವಿದ್ಯಾಲಯದ ಸಂಶೋಧನೆ ಹಾಗೂ ಯೋಜನೆಗಳ ಅನುಷ್ಠಾನದಲ್ಲಿ ಸಲಹೆಗಾರರಾಗಿ ರೈತ ಪ್ರತಿನಿಧಿಯಾಗಿ ನವೀನ್ ಆಯ್ಕೆಯಾಗಿರುವರು. ಇವರನ್ನು ಮಂಗಳೂರು ಕೆ.ವಿ.ಕೆ.ಯಿಂದ ಸೂಚಿಸಲಾಗಿತ್ತು. ನವೀನ್ ಚಾತುಬಾಯಿ ಯವರು ಈಗಾಗಲೇ ಕೃಷಿ ಇಲಾಖೆಯ ರಾಜ್ಯಮಟ್ಟದ ರೈತರ ಸಲಹಾ ಸಮಿತಿಯ ಸದಸ್ಯರಾಗಿದ್ದಾರೆ.