ಅಜ್ಜಾವರ ರಂಗೋಲಿ ಶಿಬಿರ – ಶಾಸಕರ ಭೇಟಿ

0

ಚೈತ್ರ ಯುವತಿ ಮಂಡಲ ಅಜ್ಜಾವರ ಮತ್ತು ಪ್ರತಾಪ ಯುವಕ ಮಂಡಲ ಅಜ್ಜಾವರ, ಜೇಸಿಐ ಸುಳ್ಯ ಪಯಸ್ವಿನಿ ಇವುಗಳ ಸoಯುಕ್ತ ಆಶ್ರಯದಲ್ಲಿ 2ನೇ ವರ್ಷದ “ರಂಗೋಲಿ” ಮಕ್ಕಳ ಬೇಸಿಗೆ ಶಿಬಿರದ ನಾಲ್ಕನೇ ದಿನವಾದ ಮೇ.23ರಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ಭೇಟಿ ನೀಡಿ ಶುಭ ಹಾರೈಸಿ ಮಕ್ಕಳಿಗೆ ಸಿಹಿತಿಂಡಿ ವಿತರಿಸಿದರು.

ಈ ಸಂದರ್ಭದಲ್ಲಿ ಚೈತ್ರ ಯುವತಿ ಮಂಡಲದ ಅಧ್ಯಕ್ಷೆ ಶಶ್ಮಿ ಭಟ್, ಪ್ರತಾಪ ಯುವಕ ಮಂಡಲದ ಅಧ್ಯಕ್ಷ ಗುರುರಾಜ್ ಅಜ್ಜಾವರ, ಸರಕಾರಿ ಪ್ರೌಢಶಾಲೆ ಅಜ್ಜಾವರ ಮುಖ್ಯೋಪಾಧ್ಯಾಯರಾದ ಗೋಪಿನಾಥ್ ಮೆತ್ತಡ್ಕ, ಚಂದ್ರಶೇಖರ್ ಭಟ್, ಸುಳ್ಯ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ,ಮುರುಳ್ಯ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಜಾನಕಿ, ಶ್ರೀಮತಿ ಮಾಲತಿ,ಶ್ರೀಮತಿ ಧನಲಕ್ಷ್ಮೀ, ಶ್ರೀಮತಿ ಜಯಲಕ್ಷ್ಮಿ,ಶ್ರೀಮತಿ ವೀಣಾನಾರಾಯಣ,ಸೂರ್ಯ ಕುಮಾರ್, ಅರುಣ್ ಕುಮಾರ್, ಗೌರೀಶ್, ಲೋಕೇಶ್ ರಾವ್ , ವಿನೋದ್, ಅಕ್ಷತ್ ಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಈದಿನದ ಸಂಪನ್ಮೂಲ ವ್ಯಕ್ತಿಯಾಗಿ ದೇವಿಪ್ರಸಾದ್ ಕಾಯರ್ತೋಡಿ, ಹಾಗೂ ಮಾಯಿಲಪ್ಪ ಮಂಡೆಕೋಲು ಭಾಗವಹಿಸಿದರು.