ಬಿಜೆಪಿ ನಗರ ಮಹಾಶಕ್ತಿ ಕೇಂದ್ರದ ವತಿಯಿಂದ ನಗರದ ಜನಪ್ರತಿನಿಧಿಗಳಿಗೆ ಮತ್ತು ಸಿಎ ಬ್ಯಾಂಕ್ ನ ನಿರ್ದೇಶಕರುಗಳಿಗೆ ಅಭ್ಯಾಸ ವರ್ಗ

0

ಭಾರತೀಯ ಜನತಾ ಪಾರ್ಟಿ ಸುಳ್ಯ ನಗರ ಮಹಾಶಕ್ತಿ ಕೇಂದ್ರದ ವತಿಯಿಂದ ನಗರದ ಜನಪ್ರತಿನಿಧಿಗಳಿಗೆ ಮತ್ತು ಸಿಎ ಬ್ಯಾಂಕ್ ನ ನಿರ್ದೇಶಕರುಗಳಿಗೆ ಮೇ 23ರಂದು ಅಭ್ಯಾಸ ವರ್ಗ ನಡೆಯಿತು. ಬಿಜೆಪಿ ಸುಳ್ಯ ಮಂಡಲದ ಅಧ್ಯಕ್ಷ ವೆಂಕಟ್ ವಳಲಂಬೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕುಸುಮಾದರ ಎ.ಟಿ. ಅಧ್ಯಕ್ಷತೆ ವಹಿಸಿದ್ದರು.ಮೊದಲ ಅವಧಿಯನ್ನು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವಾರ ನಡೆಸಿಕೊಟ್ಟರು. ಎರಡನೇ ಅವಧಿಯನ್ನು ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಪ್ಪಯ್ಯ ಮಣಿಯಾಣಿ ನೆರವೇರಿಸಿದರು.ಶಶಿಕಲಾ ಮತ್ತು ಬುದ್ಧ ನಾಯ್ಕರವರು ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಿದರು.ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕುಸುಮಾದರ ಎ.ಟಿ. ವಹಿಸಿದ್ದರು. ಅಪ್ಪಯ್ಯ ಮಣಿಯಾಣಿ ಸಮಾರೋಪ ಭಾಷಣ ಮಾಡಿದರು. ಶ್ರೀದೇವಿ ನಾಗರಾಜ್ ಭಟ್ ವೈಯಕ್ತಿಕ ಗೀತೆ ಹಾಡಿದರು. ವಿನಯ್ ಕುಮಾರ್ ಕಂದಡ್ಕ ಸ್ವಾಗತಿಸಿ, ಶೀಲಾವತಿ ಕುರುಂಜಿ ವಂದಿಸಿದರು. ಬಿಜೆಪಿ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ನಾರಾಯಣ ಎನ್.ಎಂ. ಕಾರ್ಯಕ್ರಮ ನಿರೂಪಿಸಿದರು.