ಪೈಚಾರಿನಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ಸೇವಾಶ್ರಯ ಮನೆಯ ಹಸ್ತಾಂತರ

0

ಅರುಣ್ ಪುತ್ತಿಲ ಸೇರಿದಂತೆ ಮನೆನಿರ್ಮಾಣಕ್ಕೆ ಸಹಕರಿಸಿದವರಿಗೆ ಮನೆಯವರಿಂದ ಸನ್ಮಾನ

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮತ್ತು ಸುಳ್ಯದ ಪುತ್ತಿಲ ಅಭಿಮಾನಿಗಳು, ಸುಳ್ಯ ನಗರ ಪಂಚಾಯತಿ ಹಾಗೂ ದಾನಿಗಳ ಸಹಕಾರದೊಂದಿಗೆ ಪೈಚಾರಿನಲ್ಲಿ ಸುಮತಿ ಎಂಬ ಬಡ ಮಹಿಳೆಗೆ ನೂತನವಾಗಿ ನಿರ್ಮಾಣ ಮಾಡಿದ ಸೇವಾಶ್ರಯ ಮನೆಯ ಹಸ್ತಾಂತರ ಕಾರ್ಯಕ್ರಮವು ಮೇ.26ರಂದು ಪೈಚಾರಿನಲ್ಲಿ ನಡೆಯಿತು.

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸದಸ್ಯರು ಹಾಗೂ ಅರ್ಚಕರಾದ ರಾಜೇಶ್ ಭಟ್ ಕುಂಡಡ್ಕ ಅವರು ಗಣಪತಿ ಹೋಮ ನೆರವೇರಿಸಿದರು.
ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾದ ಎಸ್. ಎನ್. ಮನ್ಮಥ ಅವರು ಮನೆಯೊಡತಿ ಸುಮತಿ ಅವರಿಗೆ ಕೀ ಹಸ್ತಾಂತರ ಮಾಡಿದರು.


ಬಳಿಕ ನಡೆದ ಚುಟುಕು ಸಭೆಯಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ನ.ಪಂ. ಮಾಜಿ ಅಧ್ಯಕ್ಷ ಎನ್.ಎ. ರಾಮಚಂದ್ರ, ದೇವಚಳ್ಳ ಗ್ರಾ.ಪಂ. ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ಅರಂತೋಡು – ತೊಡಿಕಾನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಎ.ಪಿ.ಎಂ. ಸಿ. ಮಾಜಿ ಉಪಾಧ್ಯಕ್ಷ ಸಂತೋಷ್ ಜಾಕೆ, ಸುದ್ದಿ ಬಿಡುಗಡೆ ಸಂಪಾದಕ ಹರೀಶ್ ಬಂಟ್ವಾಳ್, ಡಾ. ಸಾಯಿರಾಮ್, ನ.ಪಂ.ಸದಸ್ಯ ಶರೀಫ್ ಕಂಠಿ ಉಪಸ್ಥಿತರಿದ್ದು, ಮಾತನಾಡಿದರು.

ಈ ಸಂದರ್ಭದಲ್ಲಿ ಮನೆ ನಿರ್ಮಾಣಕ್ಕೆ ಸಹಕರಿಸಿದ ಅರುಣ್ ಕುಮಾರ್ ಪುತ್ತಿಲ, ನ.ಪಂ. ಸದಸ್ಯ ಶರೀಫ್ ಕಂಠಿ, ಮನೆ ನಿರ್ಮಾಣದ ಉಸ್ತುವಾರಿ ದಿನೇಶ್ ಅಡ್ಕಾರು, ಸಾತ್ವಿಕ್ ಅರಂತೋಡು, ಸುಧಾಕರ ಬಾಟೋಳಿ, ಪುಷ್ಪಾಧರ ಅರಂತೋಡು, ರಾಜೇಶ್ ಭಟ್ ಕುಂಡಡ್ಕ ಅವರನ್ನು ಸುಮತಿ ಅವರ ಮನೆಯವರು ಸನ್ಮಾನಿಸಿದರು. ದಿನೇಶ್ ಅಡ್ಕಾರು ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.