ಕೆದಿಲ ಭಾಗದಲ್ಲಿ ಶ್ರಮದಾನದ ಮೂಲಕ ವಿದ್ಯುತ್ ಲೈನಿಗೆ ತಾಗುತ್ತಿದ್ದ ಮರದ ಗೆಲ್ಲುಗಳ ತೆರವು

0

ಕಳಂಜ ಮತ್ತು ಮುಪ್ಪೇರ್ಯ ಗ್ರಾಮಗಳ ಮೂಲಕ ಕೆದಿಲ, ಮಂಞನಕಾನ ಕಡೆಗೆ ಹಾದು ಹೋಗುವ ವಿದ್ಯುತ್ ಲೈನಿಗೆ ತಾಗುತ್ತಿದ್ದ ಮರದ ಗೆಲ್ಲುಗಳ ತೆರವು ಕಾರ್ಯವನ್ನು ಆ ಭಾಗದ ಫಲಾನುಭವಿಗಳು ಮೇ. 26ರಂದು ನೆರವೇರಿಸಿದರು.
ಶ್ರಮದಾನದಲ್ಲಿ ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ ಶುಭಕುಮಾರ್ ಬಾಳೆಗುಡ್ಡೆ, ಸ್ಥಳೀಯರಾದ ನಾರಾಯಣ ನಾಯ್ಕ ಕೆದಿಲ, ನಾರಾಯಣ ನಾಯ್ಕ ವಿ, ರಾಮಚಂದ್ರ ನಾಯ್ಕ ಕೆದಿಲ, ಶಶಿಧರ ವಾರಣಾಶಿ, ದಾಮೋದರ ನಾಯ್ಕ, ಪ್ರಣೀತ್, ಚೇತನ್ ಮಂಞನಕಾನ, ಚಿನ್ಮಯ್ ಭಾಗವಹಿಸಿದ್ದರು.