ಸುದ್ದಿ ಪತ್ರಿಕಾ ವಿತರಕರ, ಸೆಂಟರ್ ಪ್ರತಿನಿಧಿಗಳ ವಾರ್ಷಿಕ ಸಮ್ಮಿಲನ ಕಾರ್ಯಕ್ರಮ

0


ಲೋಕಸಭಾ ಚುನಾವಣಾ “ಫಲಿತಾಂಶ ಊಹಿಸಿ ಬಹುಮಾನ ಗೆಲ್ಲಿ” ಸ್ಪರ್ಧೆಯ ಬಹುಮಾನ ವಿತರಣೆ


ಸುದ್ದಿ ಬಿಡುಗಡೆ ಸುಳ್ಯ ಇದರ ಪತ್ರಿಕಾ ವಿತರಕರು, ಸೆಂಟರ್ ಪ್ರತಿನಿಧಿಗಳ ವಾರ್ಷಿಕ ಸಮ್ಮಿಲನ ಕಾರ್ಯಕ್ರಮ ಜೂ. ೨೬ರಂದು ಸುಳ್ಯದ ರಂಗಮಯೂರಿ ಕಲಾಶಾಲೆಯಲ್ಲಿ ನಡೆಯಿತು. ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಮಾಜಿ ಸಚಿವ ಎಸ್. ಅಂಗಾರ, ಸುದ್ದಿ ಬಿಡುಗಡೆಯ ಸಂಪಾದಕ ಹರೀಶ್ ಬಂಟ್ವಾಳ್, ಮಾಹಿತಿ ವಿಭಾಗದ ಮುಖ್ಯಸ್ಥ ಕೃಷ್ಣ ಬೆಟ್ಟ, ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್‌ಕೆರೆ, ಸುದ್ದಿ ಪುತ್ತೂರು ಕೃಷಿ ವಿಭಾಗದ ಹರಿಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಹಿರಿಯ ಪತ್ರಿಕಾ ವಿತರಕರನ್ನು ಹಾಗೂ ಕ್ರಿಯಾಶೀಲ ಪ್ರತಿನಿಧಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.


ಲೋಕಸಭಾ ಚುನಾವಣಾ “ಫಲಿತಾಂಶ ಊಹಿಸಿ ಬಹುಮಾನ ಗೆಲ್ಲಿ” ಸ್ಪರ್ಧೆಯ ಬಹುಮಾನ ವಿತರಣೆ ಮಾಡಲಾಯಿತು. ಸುದ್ದಿ ಸಿಬ್ಬಂದಿ ಚೈತ್ರ ಪ್ರಾರ್ಥಿಸಿದರು. ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸುದ್ದಿ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಂಮನೆ ಸ್ವಾಗತಿಸಿ, ಸುದ್ದಿ ವರದಿಗಾರ ಈಶ್ವರ್ ವಾರಣಾಸಿ ಕಾರ್ಯಕ್ರಮ ನಿರೂಪಿಸಿದರು. ಭಾಗವಹಿಸಿದ ಅದೃಷ್ಟವಂತ ಪತ್ರಿಕಾ ವಿತರಕರಿಗೆ ಬಹುಮಾನ ವಿತರಿಸಲಾಯಿತು.