ಕಳಂಜ : ಸಮಸ್ತ ಸ್ಥಾಪನಾ ದಿನಾಚರಣೆ

0



ಕಳಂಜ ಬುಖಾರಿಯಾ ಜುಮ್ಮಾ ಮಸೀದಿ ಮತ್ತು ಹಯಾತುಲ್ ಇಸ್ಲಾಂ ಮದ್ರಸ ವತಿಯಿಂದ ಸಮಸ್ತ ಕೇರಳ ಜಂಇಯತುಲ್ ಉಲಮಾ ಇದರ 99ನೇ ಸ್ಥಾಪನಾ ದಿನಾಚರಣೆಯನ್ನು ಜೂ. 25ರಂದು ಆಚರಿಸಲಾಯಿತು.

ಸದರ್ ಉಸ್ತಾದ್ ಅಬ್ಬಾಸ್ ಮದನಿ, ಮದ್ರಸ ಅದ್ಯಾಪಕರಾದ ಹಸೈನಾರ್ ಮುಸ್ಲಿಯಾರ್, ಬುಖಾರಿಯ ಜುಮ್ಮಾ ಮಸೀದಿ ಕಾರ್ಯದರ್ಶಿ ಅಬ್ದುಲ್ ಮಜೀದ್ ಕಳಂಜ, ಶಾಖಾ ಎಸ್.ಕೆ.ಎಸ್.ಎಸ್‌.ಎಫ್ ಅದ್ಯಕ್ಷ ಅಶ್ರಫ್ ಎ.ಕೆ, ಜಮಾಅತ್ ಕಮಿಟಿ ಸದಸ್ಯರು ಊರಿನ ಪ್ರಮುಖರ ಮತ್ತು ಮದ್ರಸ ವಿದ್ಯಾರ್ಥಿಗಳ ನೇತೃತ್ವದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಅಬ್ಬಾಸ್ ಮದನಿ ಉಸ್ತಾದರ ಅಧ್ಯಕ್ಷತೆಯಲ್ಲಿ ಹಸೈನಾರ್ ಉಸ್ತಾದ್ ಸ್ವಾಗತಿಸಿ, ಹಸೈನಾರ್ ಉಸ್ತಾದ್ ವಂದಿಸಿದರು. ಸಮಸ್ತ ಸ್ತಾಪಕ ದಿನಾಚರಣೆಯ ಮಹತ್ವದ ಬಗ್ಗೆ ಖತೀಬ್ ಉಸ್ತಾದ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಅಬ್ದುಲ್ ಮಜೀದ್ ಎ. ಕೆ, ಮುಹಮ್ಮದ್ ಮುಸ್ಲಿಯಾರ್ ಬಿಸ್ಮಿಲ್ಲಾ, ಅಶ್ರಫ್ ಎ .ಕೆ, ಉಪಸ್ಥಿತರಿದ್ದರು.

ನಂತರ ಮದ್ರಸ ಕ್ಲಾಸ್ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ, ಖಬರ್ ಝಿಯಾರತ್ ಕೂಟು ಪ್ರಾರ್ಥನೆ ಸಿಹಿತಿಂಡಿ ವಿತರಣೆ ಕಾರ್ಯಕ್ರಮ ನಡೆಯಿತು.